ಕಾಸರಗೋಡು: ಪುಸ್ತಕ ಓದುವುದರಿಂದ ಮನಸ್ಸಿನ ಗಾತ್ರ ಹೆಚ್ಚುತ್ತದೆ, ಡಿಜಿಟಲ್ ಓದಿನ ಜತೆಗೆ ಪುಸ್ತಕ ಓದಲು ಉತ್ತೇಜನ ನೀಡಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ವಾರ್ತಾ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಸಂಘಟನಾ ಸಮಿತಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಾಚನ ದಿನಾಚರಣೆ ಕಾರ್ಯಕ್ರಮವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಇರುವವರೆಗೂ ಓದು ಇರುತ್ತದೆ. ಇದು ಅಲ್ಲಿಗೆ ಮುಗಿಯುವುದಿಲ್ಲ. ಮಹಾಕವಿಗಳಾದ ಟಿ ಉಬೈದ್, ಪಿ.ಕುಂಞÂ್ಞ ರಾಮನ್ ನಾಯರ್, ಕಯ್ಯಾರ ಕಿಞ್ಞಣ್ಣ ರೈ ಮತ್ತು ರಾಷ್ಟ್ರಕವಿ ಗೋವಿಂದ ಪೈ ಅವರು ತಮ್ಮ ಸಾಹಿತ್ಯವನ್ನು ಬರೆದ ನೆಲ ನಮ್ಮದು. ಪುಸ್ತಕಗಳನ್ನು ಓದುವುದು ಅತ್ಯಗತ್ಯ. ಪುಸ್ತಕಗಳನ್ನು ಓದಲು ಬರದಿದ್ದರೆ ದಿನಕ್ಕೆ ಒಂದು ದಿನಪತ್ರಿಕೆಯನ್ನಾದರೂ ಓದಬೇಕು. ಕೈಯಲ್ಲಿ ಒಂದಾದರೂ ಪುಸ್ತಕವಿದೆ ಎಂದು ಹೆಮ್ಮೆ ಪಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಜನರು ಪುಸ್ತಕದ ಬದಲು ಟ್ಯಾಬ್ ಗಳನ್ನು ಒಯ್ಯುತ್ತಿದ್ದಾರೆ ಎಂದರು. ಗ್ರಂಥಾಲಯ ಸಮೂಹದ ಸಂಸ್ಥಾಪಕರಾದ ಪಿ.ಎನ್.ಪಣಿಕ್ಕರ್ ಅವರ ಸ್ಮರಣಾರ್ಥ ಜಿಲ್ಲೆಯಲ್ಲಿ ಜೂ.19ರಂದು ವಾಚನ ದಿನಾಚರಣೆಯನ್ನು ವ್ಯಾಪಕವಾಗಿ ಆಚರಿಸಲಾಯಿತು.
ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ಮುನೀರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸಂದೇಶ ನೀಡಿದರು. ಉತ್ತಮ ಓದು ತನ್ನ ಸ್ವಂತ ವಿಚಾರಗಳನ್ನು ಮಾತ್ರವಲ್ಲದೆ ಇತರರ ಬದುಕನ್ನೂ ಸಮಾಜಮುಖಿಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ಕುಂಞÂ್ಞ ರಾಮನ್ ಆಶಯ ಭಾಷಣ ಮಾಡಿದರು. ದೇಶದಲ್ಲೇ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವ ರಾಜ್ಯ ಕೇರಳ. ಓದುವಿಕೆ ವೈಯಕ್ತಿಕ ಬೆಳವಣಿಗೆಯ ಒಂದು ವಿಶಿಷ್ಟ ಅಂಶವಾಗಿದೆ. ಓದು ಜ್ಞಾನ ಮತ್ತು ಅರಿವನ್ನು ನೀಡುತ್ತದೆ ಎಂದು ಕೆ.ವಿ.ಕುಂಞÂ್ಞ ರಾಮನ್ ಹೇಳಿದರು. ಪುಸ್ತಕವನ್ನು ಓದುವುದು ಸತ್ಯ ಮತ್ತು ಸುಳ್ಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ ಎಂದರು.
ಪಿ.ಎನ್.ಪಣಿಕ್ಕರ್ ಫೌಂಡೇಶನ್ ಜಿಲ್ಲಾಧ್ಯಕ್ಷ ಪ್ರೊ. ಕೆ. ಪಿ ಜಯರಾಜನ್ ಪಿ.ಎನ್. ಪಣಿಕರ್ ಸಂಸ್ಮರಣಾ ಭಾಷಣ ಮಾಡಿದರು. ಓದು ಒಂದು ದಿನಕ್ಕೆ ಸೀಮಿತವಾಗಬಾರದು. ಕೇರಳ ಇಂದು ಜಗತ್ತಿಗೆ ಮಾದರಿಯಾಗಬೇಕಾದರೆ ಸಮುದಾಯದ ಗ್ರಂಥಾಲಯಗಳಿಗೆ ಹಾಗೂ ಪಿ.ಎನ್.ಪಣಿಕ್ಕರ್ ಅವರ ನಿಸ್ವಾರ್ಥ ಸೇವೆಗೆ ಋಣಿಯಾಗಿರಬೇಕಾಗುತ್ತದೆ ಎಂದು ಕೆ. ಪಿ ಜಯರಾಜನ್ ಹೇಳಿದರು.
ವ್ಯಂಗ್ಯಚಿತ್ರಕಾರ ಕೆ.ಎ.ಗಫೂರ್ ಸಾಂಸ್ಕøತಿಕ ಉಪನ್ಯಾಸ ನೀಡಿದರು. ಮಕ್ಕಳಿಗೆ ನೀಡಬೇಕಾದ ಹಲವಾರು ಅನುಭವಗಳಲ್ಲಿ ಓದು ಕೂಡ ಒಂದು. ನಾವು ಮಕ್ಕಳನ್ನು ತಲುಪುವಂತಿರಬೇಕು. ಓದುವ ದಿನ ಕೇವಲ ಔಪಚಾರಿಕವಾಗಬಾರದು. ನಿತ್ಯ ಜೀವನದಲ್ಲಿ ಓದಿಗೆ ಜಾಗ ನೀಡಬೇಕು ಎಂದು ವ್ಯಂಗ್ಯಚಿತ್ರಕಾರ ಕೆ.ಎ.ಗಫೂರ್ ಹೇಳಿದರು.
ವಾರ್ಡ್ ಕೌನ್ಸಿಲರ್ ರಂಜಿತಾ, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ನೆಹರು ಯುವ ಕೇಂದ್ರದ ಪ್ರತಿನಿಧಿ ಅನ್ನಮ್ಮ, ಸಾಕ್ಷರತಾ ಕಾರ್ಯಕರ್ತ ಕಾವುಂಗಲ್ ನಾರಾಯಣನ್, ಶಾಲಾ ಸಂಚಾಲಕ ಡಾಮಿನಿಕ್ ಆಗಸ್ಟಿನ್, ಕಾನ್ಫೆಡ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎಸ್. ವಿ.ರಾಘವನ್ ಮತ್ತು ಸಿಇಒ ನಂದಿಕೇಶನ್ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ ಮಧುಸೂದನನ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಎಂ ಸಿದ್ದಿಕ್ ವಂದಿಸಿದರು.