ಪೆರ್ಲ: ಪಡ್ರೆ ವಾಣೀನಗರ ಸರ್ಕಾರೀ ಹೈಯರ್ ಸೆಕೆಂಡರಿ ಶಾಲೆಯ ಪ್ರವೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲೆಗೆ ಹೊಸದಾಗಿ ಸೇರಿದ ಮಕ್ಕಳನ್ನು ಚೆಂಡೆ ವಾಲಗದೊಂದಿಗೆ ವರ್ಣಮಯ ಮೆರವಣಿಗೆಯಲ್ಲಿ ಕರೆತರುವ ಮೂಲಕ ಸ್ವಾಗತಿಸಲಾಯಿತು.
ಎಣ್ಮಕಜೆ ಗ್ರಾ. ಪಂ.ಸದಸ್ಯ ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉದಯಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.7ನೇ ವಾರ್ಡ್ ಸದಸ್ಯ ನರಸಿಂಹ ಪೂಜಾರಿ, ಪ್ರಭಾರ ಪ್ರಾಂಶುಪಾಲ ಶಿವಪ್ಪ ನಾಯ್ಕ್, ಗಂಗಾಧರ ಕೆ., ಬಟ್ಯ ಮಾಸ್ತರ್ ಶುಭ ಹಾರೈಸಿದರು.
ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ಶಾಲೆ, ಕಿಳಿಂಗಾರು ಟ್ರೇಡರ್ಸ್ ಮತ್ತು 2003-04ರ ಎಸ್.ಎಸ್.ಎಲ್.ಸಿ. ಬ್ಯಾಚ್ ವತಿಯಿಂದ ಕೊಡುಗೆ ರೂಪದಲ್ಲಿ ನೀಡಲಾದ ಕಲಿಕೋಪಕರಣಗಳನ್ನು ವಿತರಿಸಲಾಯಿತು.ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಸ್ವಾಗತಿಸಿದರು.ರಾಜೇಶ್ ಬಜಕೂಡ್ಲು ವಂದಿಸಿದರು.