ಕಾಸರಗೋಡು: ಬಿಎಂಎಸ್ ಸ್ಥಾಪನಾ ದಿನಾಚರಣೆ ಅಂಗವಾಗಿ ಕಾಸರಗೋಡು ಬೀಚ್ ವಠಾರದಲ್ಲಿ ಶುಚೀಕರಣ ಕಾರ್ಯ ಹಮ್ಮಿಕೊಳ್ಳಲಯಿತು. 'ಸಮಾಜ ಸೇವೆ ಕಾರ್ಮಿಕರ ಧರ್ಮ'ಎಂಬ ಧ್ಯೇಯವಾಕ್ಯದೊಂದಿಗೆ ಸಂಘಟನೆ ಕಾರ್ಯಕರ್ತರು ಶುಚೀಕರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಬಿಎಂಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಕೀಲ ಪಿ.ಮುರಳೀಧರನ್ ಶುಚೀಕರಣಕಾರ್ಯ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಪಿ. ದಇನೇಶ್, ವಿಶ್ವನಾಥ ಶೆಟ್ಟಿ, ಕೆ. ಹರೀಶ್ ಕುದ್ರೆಪ್ಪಾಡಿ, ತಲೆಹೊರೆ ಕಾರ್ಮಿಕ ಸಂಘಟನೆ ವಲಯ ಕಾರ್ಯದರ್ಶಿ ಸತೀಶ್ ಮಧೂರು, ವಲಯ ಪದಾಧಿಕಾರಿಗಳಾದ ಕಮಲಾಕ್ಷ, ಪಿ.ರಾಜೇಶ್, ಎನ್. ಪುಷ್ಪರಾಜ್ ಕೊರಕ್ಕೋಡು, ಶಿವಪ್ರಸಾದ್ ತಾಳಿಪಡ್ಪು, ಶರತ್ ಕಡಪ್ಪುರ, ರಮೇಶ್ ಕಡಪ್ಪುರ, ಬಾಲಕೃಷ್ಣ ನೆಲ್ಲಿಕುಂಜೆ, ನವೀನ್‍ಕುಮಾರ್ ಕೆ. ಮಧೂರ್, ವಲಯ ಕಾರ್ಯದರ್ಶಿ ಗುರುದಾಸ್ ಚೇನಕ್ಕೋಡ್ ನೇತೃತ್ವ ವಹಿಸಿದ್ದರು.