ಕಾಸರಗೋಡು: ಕೆಎಸ್ಸಾರ್ಟಿಸಿ ನೌಕರರಿಗೆ ಎಲ್ಲ ತಿಂಗಳ ಐದನೇ ತಾರೀಕಿನೊಳಗೆ ವೇತನ ನೀಡಲು ಕೆಎಸ್ಸಾರ್ಟಿಸಿ ಮ್ಯಾನೇಜ್‍ಮೆಂಟ್ ತಯಾರಾಗಬೇಕು ಎಂದು ಕೆಎಸ್‍ಆರ್‍ಟಿಸಿ ಎಂಪೆÇ್ಲೀಯೀಸ್ ಅಸೋಸಿಯೇಶನ್ (ಸಿಐಟಿಯು) ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ಒತ್ತಾಯಿಸಿದೆ.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ಕೆ ರಾಜನ್ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಸಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವಿ£ಳುÉೂೀದ್ ಸಂಘಟನಾ ವರದಿ, ಜಿಲ್ಲಾ ಕಾರ್ಯದರ್ಶಿ ಎಂ ಸಂತೋಷ್ ಚಟುವಟಿಕಾ ವರದಿ ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ಪಾಟಿ , ರಾಜ್ಯ ಓಡಿಟ್ ಸಮಿತಿ ಕನ್ವೀನರ್ ಎಂ ಲಕ್ಷ್ಮಣನ್ ಉಪಸ್ಥಿತರಿದ್ದರು. ಆಯ್ಕೆಯಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ವಿನೋದ್ ಅವರಿಗೆ ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ಎಂ. ಸಂತೋಷ್ ಸ್ವಾಗತಿಸಿದರು. ಎಂ.ಎಸ್ ಕೃಷ್ಣಕುಮಾರ್ ವಂದಿಸಿದರು.