ಎರ್ನಾಕುಳಂ: ಸ್ವಪ್ನಾ ಸುರೇಶ್ ಅವರ ರಹಸ್ಯ ಹೇಳಿಕೆಯ ಪ್ರತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸರಿತಾ ಎಸ್ ನಾಯರ್ ಅವರಿಗೆ ಹಿನ್ನಡೆಯಾಗಿದೆ. ಸರಿತಾಳ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸರಿತಾ ಎರ್ನಾಕುಳಂ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸ್ವಪ್ನಾ ನೀಡಿದ ರಹಸ್ಯ ಹೇಳಿಕೆಯಲ್ಲಿ ತನ್ನ ಬಗ್ಗೆ ಉಲ್ಲೇಖವಿದೆ ಎಂದು ಸರಿತಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಗೌಪ್ಯ ಹೇಳಿಕೆಯ ಪ್ರತಿಯನ್ನು ಮೂರನೇ ವ್ಯಕ್ತಿಗೆ ನೀಡುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಅದೇ ರೀತಿ ಕ್ರೈಂ ಬ್ರಾಂಚ್ ಮತ್ತು ವಿಜಿಲೆನ್ಸ್‍ಗಳು ದುಭಾಷಿಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದಕ್ಕೂ ಮುನ್ನ ಸರಿತಾ ಅವರು ಸ್ವಪ್ನಾ ಹೇಳಿಕೆಯ ಪ್ರತಿಯನ್ನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸ್ವಪ್ನಾ ಸುರೇಶ್ ವಿರುದ್ಧ ದಾಖಲಾದ ಪಿತೂರಿ ಪ್ರಕರಣದಲ್ಲಿ ಸರಿತಾ ಕಕ್ಷಿದಾದೆ ಎನ್ನಲಾಗಿದೆ. ಇದೇ ತಿಂಗಳ 23ರಂದು ಸರಿತಾ ಹೇಳಿಕೆಯನ್ನು ತನಿಖಾ ತಂಡ ದಾಖಲಿಸಿಕೊಳ್ಳಲಿದೆ. ಏತನ್ಮಧ್ಯೆ, ಸರಿತಾ ಅವರು ಸ್ವಪ್ನಾ ಅವರ ತಪೆÇ್ಪಪ್ಪಿಗೆಯ ಪ್ರತಿಯನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.