ತಿರುವನಂತಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೆ.ರೈಲುÀ ವಿಚಾರದಲ್ಲಿ ಮುಖ್ಯಮಂತ್ರಿ ನಂತರ ಸಚಿವ ಪಿ.ರಾಜೀವ್ ಕೂಡ ಮನಸ್ಸು ಬದಲಾಯಿಸಿದ್ದಾರೆ. ರೈಲ್ವೇ ಕೇಂದ್ರ ಪಟ್ಟಿಯಲ್ಲಿದ್ದು, ಕೇಂದ್ರದ ಅನುಮತಿ ಇಲ್ಲದೇ ಸಿಲ್ವರ್ ಲೈನ್ ಯೋಜನೆ ಜಾರಿಗೊಳಿಸಲಾಗದು ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ. ಕೇಂದ್ರ ಅನುಮತಿ ನೀಡದಿದ್ದರೆ ಯೋಜನೆ ಮುಂದುವರಿಸಲು ಅಡೆತಡೆಗಳು ಎದುರಾಗಲಿವೆ. ಇದನ್ನು ಮುಖ್ಯಮಂತ್ರಿಯವರೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಯೋಜನೆಯಿಂದ ಸರ್ಕಾರ ಹಿಂದೆ ಸರಿಯುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಾಧ್ಯಮಗಳ ಸೃಷ್ಟಿಯೇ ಈಗಿನ ಈ ಗೊಂದಲಕ್ಕೆ ಕಾರಣ ಎಂದರು.
ಕೆಲವು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರದ ಒಪ್ಪಿಗೆ ಇಲ್ಲದೆ ಕೆ ರೈಲು ಯೋಜನೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಸಚಿವರೂ ಕೇಂದ್ರದ ಒಪ್ಪಿಗೆ ಪಡೆದರೆ ಮಾತ್ರ ಯೋಜನೆ ಮುಂದುವರಿಯಲು ಸಾಧ್ಯ ಎಂಬ ನಿಲುವು ತಳೆದರು.
ಏನೇ ಆಗಲಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಪದೇ ಪದೇ ಹೇಳುತ್ತಿದ್ದ ರಾಜ್ಯ ಸರಕಾರ, ತೃಕ್ಕಾಕರ ಚುನಾವಣಾ ಫಲಿತಾಂಶ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿ ಯೋಜನೆ ವಿರುದ್ಧ ಸಾರ್ವಜನಿಕ ನಿಲುವಿಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.