HEALTH TIPS

HDFC ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಶೇ.0.35ರಷ್ಟು ಹೆಚ್ಚಳ, ಏರಲಿದೆ EMI

 ಮುಂಬೈ: ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.35ರಷ್ಟು ಹೆಚ್ಚಳ ಮಾಡಿದ್ದು, ಐಎಂಐ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಕೆಲವು ತಿಂಗಳ ಅಂತರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಂಸ್ಥೆ ಎರಡನೇ ಬಾರಿಗೆ ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದ್ದು, ಈ ಹಿಂದಿನ ಶೇ.0.25ರಷ್ಟು ಬಡ್ಡಿದರ ಏರಿಕೆ ಸೇರಿದಂತೆ ಒಟ್ಟಾರೆ ಶೇ 0.60ರಷ್ಟು ಏರಿಕೆ ಮಾಡಿದಂತಾಗಿದೆ. ಶೇಕಡ 0.35ರಷ್ಟು ಬಡ್ಡಿ ಹೆಚ್ಚಳವು ಜೂನ್‌ 7ರಿಂದ ಅನ್ವಯವಾಗುವುದಾಗಿ ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಗ್ರಾಹಕರಿಗೆ ನೀಡುವ ಒಂದು ವರ್ಷದ ಸಾಲದ ಮೇಲಿನ ಬಡ್ಡಿದರವು (ಎಂಸಿಎಲ್‌ಆರ್‌) ಪರಿಷ್ಕರಣೆಯ ನಂತರ ಶೇಕಡ 7.50ರಿಂದ 7.85ಕ್ಕೆ ಏರಿಕೆಯಾಗಲಿದ್ದು, ಮೂರು ವರ್ಷದ ಎಂಸಿಎಲ್‌ಆರ್‌ ಶೇಕಡ 7.70ರಿಂದ 8.05ರಷ್ಟಾಗಲಿದೆ. ಈ ಹಿಂದೆ ಹಣದುಬ್ಬರ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೇ 4ರಂದು ರೆಪೊ ದರವನ್ನು ಶೇಕಡ 0.40ರಷ್ಟು ಹೆಚ್ಚಿಸಿತ್ತು. ಆದರೆ, ಹಣದುಬ್ಬರ ಕಡಿಮೆ ಆಗದೇ ಇರುವುದರಿಂದ ರೆಪೊ ದರವನ್ನು ಮತ್ತೆ ಕನಿಷ್ಠ ಶೇ 0.35ರಷ್ಟು ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸಭೆಯ ನಿರ್ಧಾರಗಳನ್ನು ಬುಧವಾರ ಘೋಷಿಸಲಿದೆ. ಇದರ ನಡುವೆಯೇ ಎಚ್‌ಡಿಎಫ್‌ಸಿ ನಿರ್ಧಾರ ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 7.79ಕ್ಕೆ ಏರಿಕೆ ಅಗಿದ್ದು, ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಗಟು ಹಣದುಬ್ಬರ ಸಹ ಏಪ್ರಿಲ್‌ನಲ್ಲಿ ಶೇ 15.08ಕ್ಕೆ ದಾಖಲೆಯ ಏರಿಕೆ ಕಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries