ತಿರುವನಂತಪುರ: ರಾಜ್ಯದ 2021-2022 ನೇ ಅಧ್ಯಯನ ವರ್ಷದ ಎಸ್ಎಸ್ಎಲ್ಎಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ ಶೇ.99.26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 44,363 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.
ಕಣ್ಣೂರು ಜಿಲ್ಲೆ ಅತ್ಯಧಿಕ ಫಲಿತಾಂಶ ದಾಖಲಿಸಿದೆ. ಉತ್ತೀರ್ಣ ಶೇಕಡಾವಾರು (99.7%). ಮಲಪ್ಪುರಂ ಜಿಲ್ಲೆ ಅತ್ಯಧಿಕ ಎ-ಪ್ಲಸ್ (3,024) ಹೊಂದಿದೆ. ವಯನಾಡ್ ಜಿಲ್ಲೆ ಅತ್ಯಂತ ಕಡಿಮೆ ಉತ್ತೀರ್ಣತೆಯನ್ನು ಹೊಂದಿದೆ (92.07%). 2,134 ಶಾಲೆಗಳು 100 ಪ್ರತಿಶತ ಯಶಸ್ಸು ಸಾಧಿಸಿವೆ. ಕಳೆದ ವರ್ಷ 2,210 ಶಾಲೆಗಳಿಗೆ ದೊರಕಿತ್ತು ಎಂದು ಸಚಿವ ವಿ. ಶಿವಂ ಕುಟ್ಟಿ ಹೇಳಿರುವರು.
ಕಳೆದ ವರ್ಷಕ್ಕಿಂತ ಯಶಸ್ಸಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಎಂದು ಅವಲೋಕನ ತಿಳಿಸಿದೆ. ಇಡೀ ವಿಷಯದಲ್ಲಿ ಎ + ಪಡೆದ ವಿದ್ಯಾರ್ಥಿಗಳ ಸಂಖ್ಯೆ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದರು. ನಾಳೆಯಿಂದ ಈ ತಿಂಗಳ 21ರವರೆಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಜುಲೈನಲ್ಲಿ ಪರೀಕ್ಷೆ ನಡೆಯಲಿದೆ.