ಒಂದು ಕಡೆ ಕೊರೊನಾ ಆತಂಕ, ಮತ್ತೊಂದೆಡೆ ಮಂಕಿಪಾಕ್ಸ್ ಆತಂಕ ವಿಶ್ವವನ್ನು ಕಾಡುತ್ತಿದೆ. ಮಂಕಿಪಾಕ್ಸ್ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಂಡು ಬಂದಿದೆ. ಇದೀಗ ಗುರುವಾಗ (ಜೂನ್ 23ರಂದು) ವರ್ಲ್ಡ್ ಹೆಲ್ತ್ ನೆಟ್‌ವರ್ಕ್ (WHN) ಮಂಕಿಪಾಕ್ಸ್ ಕಾಯಿಲೆಯನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ.
ವಿಶ್ವದಲ್ಲಿ ವೇಗವಾಗಿ ಹರಡುತ್ತಿದೆ ಮಂಕಿಪಾಕ್ಸ್
ಈಗಾಗಲೇ 58 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದ್ದು ಈಗಾಗಲೇ 3500 ಕೇಸ್‌ಗಳು ಪತ್ತೆಯಾಗಿವೆ. ಈ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು WHN ಹೇಳಿದೆ, ಆದ್ದರಿಂದ ಮಂಕಿಪಾಕ್ಸ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಿಲಾಗಿದೆ.
ವಿಶ್ವಕ್ಕೆ ಕಂಟಕವಾಗಲಿದೆಯೇ ಮಂಕಿಪಾಕ್ಸ್
ಮಂಕಿವೈರಸ್ ಸ್ಮಾಲ್‌ಬಾಕ್ಸ್ ವರ್ಗಕ್ಕೆ ಸೇರಿದ ವೈರಸ್ ಆಗಿದೆ. ಈಗಾಗಲೇ 58 ರಾಷ್ಟ್ರಗಳಲ್ಲಿ ಈ ವೈರಸ್ ಕಂಡು ಬಂದಿದ್ದು, ಎಲ್ಲಾ ದೇಶಗಳು ಈ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ.
ಮಂಕಿಪಾಕ್ಸ್
ಮಂಕಿಪಾಕ್ಸ್ ಮೊದಲಿಗೆ 1958ರಲ್ಲಿ ಕಂಡು ಬಂತು. ಮೊದಲು ಪ್ರಾಣಿಗಳಲ್ಲಿ ಕಂಡು ಬಂದಿತ್ತು.
* 1970ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡು ಬಂದಿತ್ತು ಎಂದು ವರದಿ ಹೇಳಿದೆ.
ಮಂಕಿಪಾಕ್ಸ್ ಲಕ್ಷಣಗಳೇನು?
* ಮಂಕಿಪಾಕ್ಸ್ ಗಂಭೀರವಾದ ಕಾಯಿಲೆಯಾಗಿದ್ದು ನಿರ್ಲಕ್ಷ್ಯ ಮಾಡಿದರೆ ತುಂಬಾನೇ ಅಪಾಯಕಾರಿ.
* ಮಂಕಿಪಾಕ್ಸ್ ಬಂದಾಗ ಜ್ವರ ಕಾಣಿಸಿಕೊಳ್ಳುವುದು
* ಕೆಮ್ಮು, ತಲೆನೋವು, ಮೈಕೈ ನೋವು, ಕುತ್ತಿಗೆ ಭಾಗದಲ್ಲಿ ಊತ ಕಂಡು ಬರುವುದು.
* ಮೊದಲಿಗೆ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗುಳ್ಳೆಗಳು ಕಂಡು ಬರುವುದು.
ಮಂಕಿಪಾಕ್ಸ್ ಹೇಗೆ ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತದೆ?
* ಮಂಕಿಪಾಕ್ಸ್ ವೈರಸ್ ತಗುಲಿರುವ ಪ್ರಾಣಿಯ ಮಾಂಸ ಸೇವನೆಯಿಂದ ಅಥವಾ ಮುನ್ನೆಚ್ಚರಿಕೆಕ್ರಮವಿಲ್ಲದೆ ಆ ಪ್ರಾಣಿಗಳ ಆರೈಕೆ ಮಾಡುವುದರಿಂದ ಹರಡುತ್ತದೆ.
* ಸೋಂಕು ಇರುವ ವ್ಯಕ್ತಿಯ ಡ್ರಾಪ್‌ಲೆಟ್ಸ್ ಮೂಲಕ ಹರಡುತ್ತದೆ, ಅವರ ಎದುರಿಗೆ ತುಂಬಾ ಹೊತ್ತು ನಿಂತರೂ ಹರಡುವ ಸಾಧ್ಯತೆ ಇದೆ.
* ತಾಯಿಯಿಂದ ಮಗುವಿಗೆ ಹರಡಬಹುದು.
* ಸೊಂಕು ಇರುವ ವ್ಯಕ್ತಿಯ ಜೊತೆಗಿನ ಲೈಂಗಿಕ ಸಂಪರ್ಕದಿಂದ ಬರುವುದು.
ಮಂಕಿಪಾಕ್ಸ್ ಲಕ್ಷಣಗಳೇನು?
* ಮಂಕಿಪಾಕ್ಸ್ ಸೋಂಕು ತಗುಲಿ 5-21 ದಿನಗಳಲ್ಲಿ ಲಕ್ಷಣಗಳು ಕಂಡು ಬರುವುದು.
* ಪ್ರಾರಂಭದಲ್ಲಿ ಸ್ಮಾಲ್‌ಪಾಕ್ಸ್ ರೀತಿ ಕಂಡು ಬರುವುದು, ಮಂಕಿಪಾಕ್ಸ್‌ನಲ್ಲಿ ಪ್ರಮುಖವಾಗಿ ದುಗ್ಧರಸ ಗ್ರಂಥಿಗಳಲ್ಲಿ ಊತ ಕಂಡು ಬರುವುದು. ಅದರಲ್ಲೂ ಕತ್ತಿನ ಸುತ್ತ ಊತ ಕಂಡು ಬರುವುದು.
* ಕತ್ತಿನ ಸುತ್ತ ಜ್ವರ ಕಾಣಿಸಿಕೊಂಡ 1-3 ದಿನಗಳಲ್ಲಿ ಗುಳ್ಳೆಗಳು ಕಂಡು ಬರುವುದು. ಅಂಗೈ, ಪಾದ, ಕಾಲುಗಳಲ್ಲಿ ಊತ ಕಂಡು ಬರುವುದು. ಈ ಕಾಯಿಲೆ ಸಾಮಾನ್ಯ 2-4 ವಾರಗಳ ಕಾಲ ಕಾಡುತ್ತದೆ.
ಮಂಕಿಪಾಕ್ಸ್‌ಗೆ ಲಸಿಕೆ ಇದೆಯೇ?
ಮಂಕಿಪಾಕ್ಸ್‌ಗಾಗಿಯೇ ಪ್ರತ್ಯೇಕ ಲಸಿಕೆ ಇಲ್ಲ. ಸ್ಮಾಲ್ಪಾಕ್ಸ್ ಲಸಿಕೆ ನೀಡಿದರೆ ಮಂಕಿಪಾಕ್ಸ್ ಶೇ.85ರಷ್ಟು ತಡೆಗಟ್ಟಬಹುದಾಗಿದೆ.