ಕೊಚ್ಚಿ: 24 ದಿನಗಳ ಕಾಯುವಿಕೆಯ ನಂತರ ಡಾ.ಆನಂದ್ ಗೋಪಿನಾಥ್ ಅವರು ತಮ್ಮ ಸಾಕುನಾಯಿಯನ್ನು ಮರಳಿ ಪಡೆದರು. ಬಹಳ ಸಮಯದ ನಂತರ, ವೈದ್ಯರು ಮುದ್ದಿನ ಮರಿಯನ್ನು ಮರಳಿ ಪಡೆದರು. ಈ ಖುಷಿಯಲ್ಲಿ ನಾಯಿ ಮರಿ ಪತ್ತೆ ಮಾಡಿದ ಮನೆಯ ಯಜಮಾನನಿಗೆ ಈ ಹಿಂದೆ ನೀಡಿದ ಭರವಸೆಯಂತೆ ವೈದ್ಯರು 1 ಲಕ್ಷ ರೂ.ಇನಾಮು ನೀಡಿದ್ದಾರೆ.
ಮಾಗು ಎಂಬ ಹೆಸರಿನ ಐದು ತಿಂಗಳ ಕಾಂಬಿ ತಳಿಯ ನಾಯಿ ಕಳೆದ ತಿಂಗಳು 12ರಂದು ನಾಪತ್ತೆಯಾಗಿತ್ತು. ಆ ದಿನದಿಂದ ವ್ರತ, ನೈವೇದ್ಯ ಮಾಡುತ್ತಾ ನಾಯಿಮರಿಗಾಗಿ ಕಾಯುತ್ತಿದ್ದ ಡಾ.ಗೋಪಿನಾಥ್ ಕಳವಳದಲ್ಲಿದ್ದರು. ಮನೆಯಿಂದ ನಾಪತ್ತೆಯಾಗಿರುವ ನಾಯಿ ಮರಿ ಪತ್ತೆ ಮಾಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ವೈದ್ಯರು ಜಾಹೀರಾತು ನೀಡಿದ್ದರು. ತನ್ನೆಲ್ಲವೂ ಆಗಿದ್ದ ನಾಯಿಮರಿ ಇಲ್ಲದೆ ದಿನಗಳೆಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು.
ಸುದೀರ್ಘ ಕಾಯುವಿಕೆಯ ನಂತರ ಡಾ. ಆನಂದ್ ಅವರ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಮನೆಯೊಂದರಲ್ಲಿ ನಾಯಿ ಮರಿ ಪತ್ತೆಯಾಯಿತು. ಇದರಿಂದ ಮನೆಯವರು ವೈದ್ಯರಿಗೆ ಮಾಹಿತಿ ನೀಡಿದರು. ನೀಲಿ ಕಾಲರ್ ಗುರುತು ನಾಯಿಮರಿಯನ್ನು ಪತ್ತೆಹಚ್ಚಲು ಸಹಾಯ ಮಾಡಿತು. ತನ್ನನ್ನು ಕಾಣುತ್ತಿರುವಂತೆ ಮಾವಿನ ಕಣ್ಣುಗಳು ಅರಳಿದವು ಮತ್ತು ಅವನು ಓಡೋಡಿ ಬಂದದನು ಎಂದು ವೈದ್ಯರು ಅದರಷ್ಟೇ ಕಣ್ಣಗಲಿಸಿ ಹೇಳಿರುವರು.