ಮುಂಬೈ: 'ದೇಶದ ಒಟ್ಟು 10 ರಾಜ್ಯಗಳಲ್ಲಿ ಬಿಎ.2.75 ತಳಿಯ ವೈರಾಣು ಹೆಚ್ಚಾಗಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 27 ಪ್ರಕರಣಗಳು ಪತ್ತೆಯಾಗಿವೆ' ಎಂದು ಆರ್ಗನೈಸ್ಡ್ ಮೆಡಿಸಿನ್ ಅಕಾಡೆಮಿಕ್ ಗಿಲ್ಡ್‌ನ (ಒಎಂಎಜಿ) ಮಹಾ ಕಾರ್ಯದರ್ಶಿ ಡಾ.ಈಶ್ವರ್ ಗಿಲಾಡ ತಿಳಿಸಿದ್ದಾರೆ.

'ಬಿಎ.2.75 ತಳಿಯ ವೈರಾಣು ಓಮೈಕ್ರಾನ್‌ನ ಇತರ ಎರಡು ಉಪ ತಳಿಯ (ಬಿಎ.2.74 ಮತ್ತು ಬಿಎ.2.76) ವೈರಾಣುಗಳಿಗಿಂತಲೂ ಹೆಚ್ಚಾಗಿ ಪಸರಿಸುತ್ತಿದೆ. ಪಶ್ಚಿಮ ಬಂಗಾಳ (13), ಕರ್ನಾಟಕ (10), ಮಧ್ಯಪ್ರದೇಶ (7) ರಾಜ್ಯಗಳಲ್ಲೂ ಅಧಿಕ ಪ್ರಕರಣಗಳು ವರದಿಯಾಗಿವೆ. ನವದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಒಂದು ಇಲ್ಲವೇ ಎರಡು ಪ್ರಕರಣಗಳು ದಾಖಲಾಗಿವೆ' ಎಂದು ಹೇಳಿದ್ದಾರೆ.
'ಬಿಎ.2.38 ತಳಿಯ ವೈರಾಣು ಈಗ ಸಾಮಾನ್ಯವಾಗಿದೆ. ಸುಮಾರು ಶೇ 80ರಷ್ಟು ಸೋಂಕಿತರಲ್ಲಿ ಈ ವೈರಾಣು ಕಂಡುಬರುತ್ತಿದೆ. ಬಿಎ.2.75 ತಳಿಯ ವೈರಾಣು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಇಂಗ್ಲೆಂಡ್, ಜರ್ಮನಿ, ಅಮೆರಿಕ, ಕೆನಡಾದಲ್ಲೂ ಪತ್ತೆಯಾಗಿದೆ' ಎಂದಿದ್ದಾರೆ.
'ಬಿಎ.2.75 ಹರಡುವಿಕೆ ಕಡಿಮೆ': ಭಾರತದಲ್ಲಿ ಬಿಎ.2.75 ಉಪ ತಳಿಯ ವೈರಾಣು ವ್ಯಾಪಕವಾಗಿ ಪಸರಿಸುತ್ತಿಲ್ಲ. ಇದು ಅಷ್ಟೇನು ಮಾರಕವಾಗಿಯೂ ಇಲ್ಲ' ಎಂದು ಮೂಲಗಳು ತಿಳಿಸಿವೆ.