ಪ್ರತಿಯೊಬ್ಬರಲ್ಲೂ ಒಂದೊಂದು ಬ್ಲಡ್‌ಗ್ರೂಪ್ ಇರುತ್ತದೆ. ರಕ್ತ ದಾನ ಮಾಡುವಾಗ, ದಾನಿಗಳ ರಕ್ತ ಪಡೆಯುವಾಗ, ಶಸ್ತ್ರ ಚಿಕಿತ್ಸೆ ಸಮಯದಾಗ ನಮ್ಮ ದೇಹದ ರಕ್ತದ ಗುಂಪು ಯಾವುದು ಎಂದು ತಿಳಿದಿರುವುದು ತುಂಬಾನೇ ಮುಖ್ಯವಾಗುತ್ತೆ.
ಸಾಮಾನ್ಯವಾಗಿ ಜನರಲ್ಲಿ 'A','B','O'ಅಥವಾ 'AB' ಬ್ಲಡ್ ಗ್ರೂಪ್ ಇರುತ್ತದೆ. A, B, O, Rh ಮತ್ತು Duffyಯಂಥ 42 ಬಗೆಯ ಸಿಸ್ಟಮ್ ಇರುತ್ತೆ, ಜೊತೆಗೆ 375 ಬಗೆಯ ಆ್ಯಂಟಿಜೆನ್‌ಗಳಿದ್ದು ಅವರಲ್ಲಿ EMM ತುಂಬಾ ಅಧಿಕವಿರುತ್ತದೆ.
ಆದರೆ EMM ಕಡಿಮೆ ಇರುವ 10 ಜನರು ಈ ವಿಶ್ವದಲ್ಲಿದ್ದಾರೆ
ರಕ್ತದಲ್ಲಿ EMM ಅತಿ ಕಡಿಮೆ ಇರುವ ಜನರು ಈ ವಿಶ್ವದಲ್ಲಿ ಬರೀ 10 ಮಂದಿ ಇದ್ದಾರೆ, ಇವರು ಇತರ ಸಾಮಾನ್ಯ ಜನರಿಗಿಂತ ಭಿನ್ನವಾಗಿರುತ್ತಾರೆ, ಇಂಥ ವ್ಯಕ್ತಿಗಳು ಯಾರಿಗೂ ರಕ್ತದಾನ ಮಾಡಲು ಸಾಧ್ಯವಿಲ್ಲ, ಬೇರೆಯವರಿಂದ ರಕ್ತ ಪಡೆಯಲೂ ಸಾಧ್ಯವಿಲ್ಲ.
ಭಾರತದಲ್ಲಿ ವಿಭಿನ್ನ ಬ್ಲಡ್ ಗ್ರೂಪ್ ಏಕೈಕ ವ್ಯಕ್ತಿ
ವಿಭಿನ್ನ ಬ್ಲಡ್ ಗ್ರೂಪ್‌ನ ಜನರು ಬರೀ 9 ಜನರಷ್ಟೇ ಇದ್ದರು, ಇದೀಗ ಭಾರತದ ವ್ಯಕ್ತಿಯೂ ಆ ಗುಂಪಿಗೆ ಸೇರಿದ್ದಾರೆ. ಗುಜರಾತಿನ 65 ವರ್ಷದ ವ್ಯಕ್ತಿಯಲ್ಲಿ ಈ ರೀತಿಯ ವಿಚಿತ್ರ ಬ್ಲಡ್ ಗ್ರೂಪ್ ಇದೆ. ಆ ವ್ಯಕ್ತಿ ಹೃದ್ರೋಗಿಯಾಗಿದ್ದು ಅವರಿಗೆ ಸರ್ಜರಿ ಮಾಡಲು ರಕ್ತ ಬೇಕಾಗಿತ್ತು. ಆದರೆ ಆತನ ಬ್ಲಡ್ ಗ್ರೂಪ್ ಅಹ್ಮದಾಬಾದ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು.
ಆದರೆ ಅವರು ಗ್ರೂಪ್ ಅಲ್ಲಿ ಪತ್ತೆಯಾಗಿಲ್ಲ ಆಗ ಸೂರತ್‌ನ ಬ್ಲಡ್ ಡೊನೇಷನ್ ಸೆಂಟರ್‌ಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಅವರ ರಕ್ತ ಸಾಮಾನ್ಯವಾಗಿ ಜನರಲ್ಲಿ ಕಂಡು 4 ಬಗೆಯ ರಕ್ತದ ಗುಂಪಿಗೆ ಮ್ಯಾಚ್ ಆಗಲೇ ಇಲ್ಲ,
EMM ನೆಗೆಟಿವ್ ಬ್ಲಡ್ ಗ್ರೂಪ್
ನಂತರ ಆ ವ್ಯಕ್ತಿಯ ರಕ್ತದ ಸ್ಯಾಂಪಲ್ ಜೊತೆಗೆ ಅವರ ಕುಟುಂಬಸ್ಥರ ರಕ್ತದ ಸ್ಯಾಂಪಲ್ ಅನ್ನು ಅಮೆರಿಕದ ಲ್ಯಾಬ್‌ಗೆ ಪರಿಶೀಲನೆಗೆ ಕಳುಹಿಸಲಾಯಿತು. ಆಗ ಗುಜರಾತಿನ ಈ ವ್ಯಕ್ತಿಯ ರಕ್ತದಲ್ಲಿ EMM ನೆಗೆಟಿವ್ ಇರುವುದು ತಿಳಿದು ಬಂತು.