ಜಿನೇವಾ/ನವದೆಹಲಿ: ಜಗತ್ತಿನಾದ್ಯಂತ ಕೋವಿಡ್ ಸಾಂಕ್ರಾಮಿಕತೆ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸಾಪ್ತಾಹಿಕ ವರದಿಯಲ್ಲಿ ಹೇಳಿದೆ. ಕಳೆದ ವಾರ 41 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು ಶೇಕಡ 18ರಷ್ಟು ಏರಿಕೆಯಾಗಿದೆ ಎಂದು ಅದು ವಿವರಿಸಿದೆ.

ಜಗತ್ತಿನಾದ್ಯಂತ ಕರೊನಾ ಸಾವುಗಳು ಹಿಂದಿನ ವಾರ 8,500 ಆಗಿದೆ ಎಂದಿದೆ. ಮಧ್ಯ ಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಅಮೆರಿಕನ್ ದೇಶಗಳಲ್ಲಿ ಕರೊನಾ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ. 110 ದೇಶಗಳಲ್ಲಿ ಸಾಂಕ್ರಾಮಿಕತೆ ಹೆಚ್ಚುತ್ತಿದೆ. ಒಮಿಕ್ರಾನ್ನ ಬಿಎ.4 ಮತ್ತು ಬಿಎ.5 ಉಪ-ತಳಿಗಳು ಇದಕ್ಕೆ ಪ್ರಮುಖ ಕಾರಣವೆಂದು ಡಬ್ಲ್ಯುಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಹೇಳಿದ್ದಾರೆ.
ಶೇಕಡ 2 ಪ್ರಯಾಣಿಕರ ಟೆಸ್ಟ್: ಭಾರತದಲ್ಲಿ ಕಳೆದ ಕೆಲವು ದಿನಗಳಿಂದ 10,000ಕ್ಕೂ ಅಧಿಕ ಕೋವಿಡ್ ಕೇಸ್ಗಳು ದೃಢಪಡುತ್ತಿರುವುದರಿಂದ ದೇಶದೊಳಗೆ ಬರುವ ವಿಮಾನ ಪ್ರಯಾಣಿಕರಲ್ಲಿ ಶೇಕಡ ಎರಡರಷ್ಟು ಜನರನ್ನು ಯಾದೃಚ್ಛಿಕವಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರ ಬುಧವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಎಲ್ಲ ಪಾಸಿಟಿವ್ ಸ್ಯಾಂಪಲ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ರವಾನಿಸುವಂತೆ ಹೇಳಿದೆ.
ಭಾರತದಲ್ಲಿ ಲಕ್ಷ ದಾಟಿದ ಸಕ್ರಿಯ ಕೇಸ್: ಭಾರತದಲ್ಲಿ ಗುರುವಾರ ಕರೊನಾ ಸಾಂಕ್ರಾಮಿಕತೆಯ 18,819 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 39 ರೋಗಿಗಳು ಮೃತಪಟ್ಟಿದ್ದಾರೆ. 1,04,555 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಬುಧವಾರ 99,602 ಸಕ್ರಿಯ ಪ್ರಕರಣಗಳಿದ್ದವು. ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 5,25,116ಕ್ಕೆ ತಲುಪಿದೆ.