ಇಂದು 2022ರ ವರ್ಷದ ಅತೀ ದೊಡ್ಡ ಸೂಪರ್ ಮೂನ್ ಜುಲೈ 13ರಂದು ಕಾಣ ಸಿಗಲಿದೆ. ಈ ದಿನ ನೀವು ಬೃಹದಾಕಾರದ ಚಂದ್ರನನ್ನು ಕಣ್ತುಂಬಿಕೊಳ್ಳಹುದು. ಇದನ್ನು ಸೂಪರ್ ಮೂನ್ ಎಂದು ಕರೆಯಲಾಗಿದೆ.
ಸೂಪರ್ ಮೂನ್‌ನ ವಿಶೇಷತೆ ಏನು? ಈ ದಿನ ಚಂದ್ರ ಉಳಿದ ಸಮಯದಲ್ಲಿ ಕಾಣುವುದಕ್ಕಿಂತ ಅತಿ ದೊಡ್ಡ ಗಾತ್ರದಲ್ಲಿ ಕಾಣುವುದು ಏಕೆ ಎಂದು ನೋಡೋಣ ಬನ್ನಿ:
ಸೂಪರ್ ಮೂನ್ ಎಂದರೇನು? ಚಂದ್ರ ಭೂಮಿಯ ಸುತ್ತ ಸುತ್ತುವ ಉಪಗ್ರಹವಾಗಿದೆ. ಈ ಚಂದ್ರ ಹೀಗೆ ಭೂಮಿಯ ಸುತ್ತ ಸುತ್ತುವಾಗ ಈ ದಿನದಂದು ಭೂಮಿಯ ಸಮೀಪಕ್ಕೆ ಬರಲಿದೆ. ಅಂದರೆ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿ. ಮೀ ಸಮೀಪ ಬರುವುದರಿಂದ ಈ ದಿನದಂದು ಚಂದ್ರ ಉಳಿದೆಲ್ಲಾ ದಿನಕ್ಕಿಂತ ತುಂಬಾ ದೊಡ್ಡದಾಗಿ ಕಾಣಲಿದೆ. ಹೀಗಾಗಿ ಮಾಮೂಲಿಯಾಗಿ ಕಾಣುವುದಕ್ಕಿಂತ ಶೇ. 15ರಷ್ಟು ದೊಡ್ಡದಾಗಿ ಕಾಣಲಿದೆ. ಇದನ್ನು ಸೂಪರ್ ಮೂನ್ ಎಂದು ಕರೆಯಲಾಗುವುದು.ಚಂದ್ರ ತುಂಬಾ ಪ್ರಕಾಶಮಾನವಾಗಿ ಕಾಣಲಿದೆ ಈ ಜ್ಯೇಷ್ಠ ಮಾಸದ ಹುಣ್ಣಿಮೆಯಲ್ಲಿ ಚಂದ್ರ ಭೂಮಿಗೆ ತುಂಬಾ ಸಮೀಪಕ್ಕೆ ಬರಲಿದೆ. ಅಂದರೆ ಉಳಿದ ಸಮಯದಲ್ಲಿ ಚಂದ್ರ-ಭೂಮಿ ನಡುವೆ ಇರುವ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ ಇದ್ದರೆ ಈ ದಿನ 3 ಲಕ್ಷದ 57 ಸಾವಿರ ಕಿ.ಮೀ ಮಾತ್ರ ಇರುತ್ತದೆ. ಹೀಗಾಗಿ ಚಂದ್ರ ಪ್ರಕಾಶಮಾನವಾಗಿ ಕಾಣಲಿದೆ.
ಈ ದಿನ ಸಮುದ್ರ ಬಳಿಗೆ ಹೋಗುವಾಗ ಹುಷಾರ್ ನಮ್ಮ ಪೂರ್ವಿಕರು ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ಜ್ಯೇಷ್ಠ ನಕ್ಷತ್ರವೂ ಒಂದು. ಜ್ಯೋತಿಷ್ಯವನ್ನು ಕೂಲಂಕಷವಾಗಿ ಅಲೋಕಿಸಿದರೆ ನಮ್ಮ ಪೂರ್ವಿಕರು ಪ್ರತಿಯೊಂದು ವಿಷಯವನ್ನು ವೈಜ್ಞಾನಿಕವಾಗಿ ಹೇಳಿದ್ದಾರೆ, ಆದರೆ ಜನರಿಗೆ ಅರ್ಥವಾಗಲು ಜ್ಯೋತಿಷ್ಯದ ಮೂಲಕ ಹೇಳಿದ್ದಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಲ್ಲಿ ಜ್ಯೇಷ್ಠ ನಕ್ಷತ್ರ ಕೂಡ ಒಂದು, ಇದನ್ನು ವೈಜ್ಞಾನಿಕವಾಗಿ ಅಂಟಾರಸ್ ಎಂದು ಕರೆಯಲಾಗಿದೆ. ಜ್ಯೇಷ್ಠ ಅಂದರೆ ದೊಡ್ಡದು ಎಂದರ್ಥ, ಇನ್ನು ಈ ಸಮಯದಲ್ಲಿ ಸಮುದ್ರದ ಅಲೆಗಳ ರಭಸ ಜೋರಾಗಿರುತ್ತೆ. ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಆದ್ದರಿಂದ ಈ ದಿನ ಸಮುದ್ರ ಪಕ್ಕ ಹೋಗಿ ಸೆಲ್ಫಿ ಹುಚ್ಚಾಟಗಳನ್ನು ಮಾಡದಿರಿ.