ನವದೆಹಲಿ: ಹವಾಮಾನ ಬದಲಾವಣೆಯೊಂದಿಗೆ ದೇಶದಲ್ಲಿ ಕೋವಿಡ್ 4ನೇ ಅಲೆ ಏರುಗತಿ ಪಡೆದು ಕೊಂಡಂತಿದ್ದು, 13 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪೈಕಿ ಕೇರಳ (26,451) ಎರಡನೇ ಸ್ಥಾನದಲ್ಲಿದೆ.
ನವದೆಹಲಿ: ಹವಾಮಾನ ಬದಲಾವಣೆಯೊಂದಿಗೆ ದೇಶದಲ್ಲಿ ಕೋವಿಡ್ 4ನೇ ಅಲೆ ಏರುಗತಿ ಪಡೆದು ಕೊಂಡಂತಿದ್ದು, 13 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪೈಕಿ ಕೇರಳ (26,451) ಎರಡನೇ ಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳ (27,496) ಮೊದಲ ಸ್ಥಾನದಲ್ಲಿದ್ದರೆ, , ತಮಿಳುನಾಡು (18,282) ಮೂರು ಹಾಗೂ ಮಹಾರಾಷ್ಟ್ರ (16,922) ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕ 6,739 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.. ಉಳಿದಂತೆ ತೆಲಂಗಾಣ (5,082), ಗುಜರಾತ್ (4,225), ಒಡಿಸ್ಸಾ (3,511), ಅಸ್ಸಾಂ (2,584), ಬಿಹಾರ (2,511), ಉತ್ತರ ಪ್ರದೇಶ (2,363) ಆಂಧ್ರಪ್ರದೇಶ (2,121) ಹಾಗೂ ಛತ್ತೀಸ್ಗಢ (2,068) ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಾಗಿವೆ.