HEALTH TIPS

15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು : ಇವರ ವೈಯಕ್ತಿಕ ಬದುಕಿನಲ್ಲಿ ವಿಧಿಯಾಡಿತು ಕ್ರೂರ ಆಟ

 ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಇಡೀ ದೇಶ ಶುಭಾಶಯಗಳನ್ನು ಕೋರುತ್ತಿದ್ದಾರೆ.

ದೇಶದ ಪ್ರಥಮ ಪ್ರಜೆಯಾಗಿರುವ ಎರಡು ವಿಷಯಗಳಲ್ಲಿ ಗಮನ ಸೆಳೆಯುತ್ತಿದ್ದಾರೆ

1. ದೇಶದ ರಾಷ್ಟ್ರಪತಿ ಸ್ಥಾನಕೇರಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತೊ

2. ದೇಶದ ಎರಡನೇ ಮಹಿಳಾ ರಾಷ್ಟ್ರಪತಿ

ಪ್ರತಿಭಾ ಪಾಟೇಲ್ ಬಳಿಕ ಆ ಸ್ಥಾನದ ಜವಾಬ್ದಾರಿ ಹೊತ್ತಿರುವ ಎರಡನೇ ಮಹಿಳೆ.

ದ್ರೌಪದಿ ಮುರ್ಮು ಇಂದು ದೇಶದ ಅತ್ಯುನ್ನತ ಪದವಿಯಲ್ಲಿದ್ದರೂ ಅವರ ಮನಸ್ಸಿನಲ್ಲಿ ಎಂದ ಮಾಸದ ಶಾಶ್ವತ ನೋವು ಮಡುಗಟ್ಟಿದೆ. ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಾಗ ವಿಧಿ ವ್ಯಕ್ತಿಯ ಬಾಳಲ್ಲಿ ಇಷ್ಟೊಂದು ಕ್ರೂರಿಯಾಗಿರುತ್ತಾ ಎನ್ನುವಷ್ಟರ ಮಟ್ಟಿಗೆ ವಿಧಿ ಇವರ ಬದುಕಿನಲ್ಲಿ ಆಟವಾಡಿದೆ. ಪುತ್ರ ಶೋಕಂ ನಿರಂತರ ಅಂತಾರೆ, ಆದರೆ ಇವರು ಒಬ್ಬರಲ್ಲ, ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾರೆ.

ದ್ರೌಪದಿ ವರ್ಮ 1958 ಜೂನ್‌ 20ರಲ್ಲಿ ಒಡಿಸ್ಸಾದ ಉಪಾರಬೇಡ ಗ್ರಾಮದ ಸಾಂತಲಿ ಬುಡಕಟ್ಟು ಪ್ರಭಾವಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ತಾತ ಅವರ ಸಮುದಾಯದವರ ನ್ಯಾಯಪಂಚಾಯಿತ್‌ ಮಾಡುವ ಸರ್ಪಂಚ್‌ಗಳಾಗಿದ್ದರು. ಏನೂ ಸೌಕರ್ಯವಿಲ್ಲದ ಒಂದು ಚಿಕ್ಕ ಹಳ್ಳಿಯಿಂದ ದಿಲ್ಲಿಯತ್ತ ಅವರ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.

ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು

ಓದಿನಲ್ಲಿ ತುಂಬಾ ಚುರುಕು ಇದ್ದ ದ್ರೌಪದಿ ಮುರ್ಮು ಪ್ರಾರಂಭದಲ್ಲಿ ಶಿಕ್ಷಕಿ ವೃತ್ತಿಯನ್ನು ಮಾಡುತ್ತಾರೆ. ಪ್ರಸಿದ್ದ 'ಶ್ರೀ ಅರಬಿಂದೋ ಸಮಗ್ರ ಶಿಕ್ಷಣ' ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿ ಕೂಡ ಸ್ವಲ್ಪ ಸಮಯ ಕಾರ್ಯನಿರ್ವಹಿಸಿದ್ದರು.

ನಂತರ ಸ್ವಲ್ಪ ಸಮಯ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗದು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಮೊದಲ ಅನುಭವ.

1997ರಲ್ಲಿ ದ್ರೌಪದಿ ಮುರ್ಮು ಬಿಜೆಪಿ ಸೇರುತ್ತಾರೆ, ಕೂಡಲೇ ಅವರಿಗೆ ಕೌನ್ಸಿಲರ್ ಹುದ್ದೆ ನೀಡಲಾಗುವುದು. ತಮ್ಮ ಕಾರ್ಯವೈಖರಿಯಿಂದಾಗಿ ದ್ರೌಪದಿ ಮುರ್ಮು ಒಳ್ಳೆಯ ಹೆಸರು ಗಳಿಸುತ್ತಾರೆ. 2000ನೇ ಇಸವಿಯಲ್ಲಿ ರಾಯರಂಗಪುರ ಪಂಚಾಯತಿನಲ್ಲಿ ಅಧ್ಯಕ್ಷರಾಗುತ್ತಾರೆ, ಹೀಗೆ ರಾಜಕೀಯದಲ್ಲಿ ಬೆಳೆಯಲಾರಂಭಿಸುತ್ತಾರೆ. 2000 ಮಾರ್ಚ್‌ 2002ರವರೆಗೆ ಸ್ವತಂತ್ರ ಶುಲ್ಕದ ವಾಣಿಜ್ಯ ಹಾಗೂ ಸಾರಿಗೆ ಮಂತ್ರಿಯಾಗಿದ್ದರು. ನಂತರ ಮೀನು ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿಯಲ್ಲಿ 2022ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಜಾರ್ಖಂಡ್‌ನ ಗರ್ವನರ್‌ ಆಗ ಕೂಡ ಕಾರ್ಯನಿರ್ವಹಿಸಿದ್ದಾರೆ.

ರಾಜಕೀಯದಲ್ಲಿ ಬೆಳೆಯುತ್ತಿದ್ದಾಗ ವೈಯಕ್ತಿಕ ಬದುಕಿನಲ್ಲಿ ಎದುರಾಯ್ತು 3 ಆಘಾತ

ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ತುಂಬಾನೇ ಚೆನ್ನಾಗಿತ್ತು, 2010ರಲ್ಲಿ ಅವರ ಬದುಕಿನಲ್ಲಿ ದೊಡ್ಡ ದುರಂತವೇ ಉಂಟಾಯಿತು. ಪತಿ, ಮೂವರು ಮಕ್ಕಳ ಸುಂದರ ಕುಟುಂಬವಾಗಿತ್ತು ಅವರದ್ದು, ಆದರೆ 2010ರಲ್ಲಿ ಅವರ ಮಗ ಸಾವನ್ನಪ್ಪುತ್ತಾರೆ. ಒಬ್ಬ ಮಗನನ್ನು ಕಳೆದುಕೊಂಡ ದುಃಖದಲ್ಲಿರುವಾಗ ವಿಧಿ ಮತ್ತೊಮ್ಮೆ ಅವರ ಬದುಕಿನಲ್ಲಿ ಆಟವಾಡಿತು. ಎರಡನೇ ಮಗನನ್ನು 2013ರಲ್ಲಿ ಅಪಘಾತದಲ್ಲಿ ಕಳೆದುಕೊಂಡರು. ದ್ರೌಪದಿ ಮುರ್ಮು ಹಾಗೂ ಅವರ ಪತಿ ಶ್ಯಾಮ್‌ಗೆ ಬದುಕಿನಲ್ಲಿ ಸಂಪೂರ್ಣ ಕತ್ತಲಾವರಿಸಿತು. ಇಬ್ಬರು ಪುತ್ರರನ್ನು ಕಳೆದುಕೊಂಡ ದುಃಖದಲ್ಲಿಯೇ 2014ರಲ್ಲಿ ಪತಿ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. 2009ರಿಂದ- 2015ರ ನಡುವೆ ತಾಯಿ ಹಾಗೂ ಒಬ್ಬ ಸಹೋದರನನ್ನೂ ಕಳೆದುಕೊಳ್ಳುತ್ತಾರೆ.

ಈಗ ಅವರಿಗಿರುವುದು ಒಬ್ಬಳು ಮಗಳು ಮಾತ್ರ, ಮಗಳೊಂದಿಗೆ ವಾಸವಾಗಿದ್ದಾರೆ.

ಮನಸ್ಸಿನಲ್ಲಿ ಇಷ್ಟೆಲ್ಲಾ ನೋವು ಇದ್ದರೂ ಜನ ಸೇವೆ ಮಾಡುವುದನ್ನು ಮರೆಯಲಿಲ್ಲ, ಆದ್ದರಿಂದಲೇ ಇಂದು ಅವರಿಗೆ ರಾಷ್ಟ್ರಪತಿ ಹುದ್ದೆ ಲಭಿಸಿದೆ.


 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries