ಕಾಸರಗೋಡು: ಕೈಗಾರಿಕಾ ಇಲಾಖೆಯ ಧನಸಹಾಯ ಯೋಜನೆಯಾದ ಉದ್ದಿಮೆ ಸಹಾಯ ಯೋಜನೆ(ಇ.ಎಸ್.ಎಸ್)ಯಲ್ಲಿ ಒಳಪಡಿಸಿ, ಜಿಲ್ಲೆಯ 29ಕಿರು ಉದ್ದಿಮೆಗಳಿಗೆ 1,08,37,050 ರೂ. ಸಹಾಯಧನ ಮಂಜೂರುಗೊಳಿಸಲಾಗಿದೆ.
ಇಎಸ್ ಎಸ್ ಯೋಜನೆಯು ಉತ್ಪಾದನಾ ವಲಯದ ಕೈಗಾರಿಕಾ ಉದ್ಯಮಿಗಳಿಗೆ ಶೇ.15 ರಿಂದ 45 ರಷ್ಟು ಸಹಾಯಧನವನ್ನು ಪಡೆಯುವ ಯೋಜನೆಯಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ವಿಶೇಷ ಸಮಿತಿ ಸಹಾಯಧನದ ಮೊತ್ತಕ್ಕೆ ಅಂಗೀಕಾರ ನೀಡಿದೆ. ಆಹಾರ ಸಂಸ್ಕರಣೆ, ಉಡುಪು ತಯಾರಿಕೆ, ಇಂಜಿನಿಯರಿಂಗ್, ಇಂಟೀರಿಯರ್ ಡೆಕೊರೇಶನ್ ಮತ್ತು ಪೀಠೋಪಕರಣ ತಯಾರಿ ಕ್ಷೇತ್ರಗಳಲ್ಲಿ ಅರ್ಜಿಗಳನ್ನು ಪರಿಗಣಿಸಲಾಗಿದೆ. ಜಿಲ್ಲಾ ಹಣಕಾಸು ಅಧಿಕಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್, ಕೆ.ಎಫ್.ಸಿ. ವ್ಯವಸ್ಥಾಪಕರು, ಕೆಎಸ್‍ಎಸ್‍ಐಎ ಅಧ್ಯಕ್ಷರುÉೂಳಗೊಂಡ ಸಮಿತಿಯ ಸಂಚಾಲಕರು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ. ಈ ಆರ್ಥಿಕ ವರ್ಷದಲ್ಲಿ 5 ಕೋಟಿ ರೂ.ಗಳ ಆರ್ಥಿಕ ನೆರವು ವಿತರಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ. .