ಬರ್ಮಿಂಗ್ಹ್ಯಾಮ್: ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ 2 ನೇ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡದ ವಿರುದ್ಧ 49 ರನ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವನ್ನು ಸಮರ್ಥವಾಗಿ ಎದುರಿಸಿದ ಭಾರತದ ಬ್ಯಾಟ್ಸ್ಮನ್ ಗಳು ಇಂಗ್ಲೆಂಡ್ ತಂಡಕ್ಕೆ 171 ರನ್ ಗಳ ಗುರಿ ನೀಡಿತ್ತು.
ಇಂಗ್ಲೆಂಡ್ ಗೆ ಆರಂಭದಲ್ಲೇ ಮರ್ಮಾಘಾತ ನೀಡಿದ ಭಾರತದ ಬೌಲಿಂಗ್ ವಿಭಾಗ, ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು.
ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಜೇಸನ್ ರಾಯ್, ಜೋಸ್ ಬಟ್ಲರ್, ವೈಫಲ್ಯದಿಂದ ಇಂಗ್ಲೆಂಡ್ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊಯೀನ್ ಅಲಿ ಹಾಗೂ ಡೇವಿಡ್ ವಿಲ್ಲೆ ಇಂಗ್ಲೆಂಡ್ ತಂಡದ ಪರ ಉತ್ತಮ ಸ್ಕೋರ್ ಗಳಿಸಲು ಯತ್ನಿಸಿದರಾದರೂ ಭಾರತದ ಬೌಲರ್ ಗಳ ಅಬ್ಬರದೆದುರು ಹೆಚ್ಚು ಸಮಯ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡ 17 ಓವರ್ ಗಳಿಗೆ 121 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಭುವನೇಶ್ವರ್ ಕುಮಾರ್ 1 ಮೇಡಿನ್ ಓವರ್, 15 ರನ್ ನೀಡಿ 3 ವಿಕೆಟ್ ಗಳಿಸುವ ಮೂಲಕ ಭಾರತದ ಪರ ಅತ್ಯುತ್ತಮ ಬೌಲರ್ ಎನಿಸಿದರು.