ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ 2021-22 ಸಾಲಿನ ವಾರ್ಷಿಕ ಯೋಜನೆಯ ಅವಲೋಕನ ಮತ್ತು ನೈರ್ಮಲ್ಯ ಯೋಜನೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಸಮಾಲೋಚನಾ ಸಭೆಯು ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ. ಕೆ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ತ್ಯಾಜ್ಯ ವಿಲೇವಾರಿಗೆ ಬ್ಲಾಕ್ ಪಂಚಾಯಿತಿಯ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನೈರ್ಮಲ್ಯ ಮಿಷನ್ ಸಂಯೋಜಕಿ ಎಂ.ಲಕ್ಷ್ಮಿ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ, ಪುತ್ತಿಗೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷರು ಮಾತನಾಡಿದರು. ಬಿಡಿಒ ಸೀಮಾ ಕುಂಜಲ್ ಕಾರ್ಯಾಚರಣೆ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯಿತಿಯಲ್ಲಿ ಹರಿತ ಕ್ರಿಯಾಸೇನೆ ಸಂಗ್ರಹಿಸಿ ವಿಂಗಡಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಆರ್ ಆರ್ ಎಫ್ ಗೆ ಸಾಗಿಸಿ ಅಲ್ಲಿ ಪುಡಿಮಾಡಿ ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸುವ ಗುರಿಯನ್ನು ಯೋಜನೆ ಹೊಂದಿದೆ ಎಂದು ಬಿಡಿಒ ಮಾಹಿತಿ ನೀಡಿದರು. ಹಸಿರು ಕೇರಳ ಆರ್.ಪಿ.ಇಬ್ರಾಹಿಂ ಮಾಸ್ತರ್ ನಿರೂಪಿಸಿದರು. ಜಿಇಒ ಸುಜಿತ್ ಕುಮಾರ್ ವರದಿ ಮಂಡಿಸಿದರು. ವಿಸ್ತರಣಾ ಯೋಜನಾಧಿಕಾರಿ ಸುಗುಣಕುಮಾರ್ ವಂದಿಸಿದರು.