ತಿರುವನಂತಪುರ: ಎನ್ ಐ ಆರ್ ಎಫ್ ಶ್ರೇಯಾಂಕದಲ್ಲಿ ಕೇರಳ ಭಾರಿ ಮುನ್ನಡೆ ಸಾಧಿಸಿದೆ. ರಾಜ್ಯದ ಮೂರು ವಿಶ್ವವಿದ್ಯಾನಿಲಯಗಳು ಪಟ್ಟಿಯಲ್ಲಿ ಅಗ್ರ 100 ರಲ್ಲಿ ಸ್ಥಾನ ಪಡೆದಿವೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಣಯಿಸುವ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (ಎನ್.ಐ.ಆರ್.ಎಫ್) ರಾಜ್ಯವು ಲಾಭ ಗಳಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್ ಬಿಂದು ಮಾಹಿತಿ ನೀಡಿದ್ದಾರೆ.
ಎಂ.ಜಿ. ವಿಶ್ವವಿದ್ಯಾಲಯ (51ನೇ), ಕೇರಳ ವಿಶ್ವವಿದ್ಯಾಲಯ (52ನೇ) ಮತ್ತು ಸಿ.ಯು.ಎಸ್.ಎ.ಟಿ (69ನೇ) ಕೇರಳದ ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಸೇರಿವೆ. ಕಾಲೇಜುಗಳ ಪಟ್ಟಿಯಲ್ಲಿ ಕೇರಳದ 17 ಸಂಸ್ಥೆಗಳು ಟಾಪ್ 100 ರಲ್ಲಿವೆ. ತಿರುವನಂತಪುರಂನ ಯೂನಿವರ್ಸಿಟಿ ಕಾಲೇಜು ಇಪ್ಪತ್ತನಾಲ್ಕನೇ ಯಾರ್ಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ 27, ಸೇಂಟ್ ತೆರೇಸಾ ಕಾಲೇಜು ಎರ್ನಾಕುಳಂ 37, ಮಾರ್ ಇವಾನಿಯೋಸ್ ಕಾಲೇಜು ತಿರುವನಂತಪುರಂ 50, ಮಹಿಳಾ ಸರ್ಕಾರಿ ಕಾಲೇಜು ತಿರುವನಂತಪುರಂ 53, ಮಾರ್ ಅಥಾನಾಸಿಯಸ್ ಕಾಲೇಜು ಕೋತಮಂಗಲಂ 56, ಬಿಷಪ್ ಮೂರ್ ಕಾಲೇಜು ಮಾವೆಲಿಕ್ಕಾರ 58, ಸೇಕ್ರೆಡ್ ಹಾರ್ಟ್ ಕಾಲೇಜು ಎರ್ನಾಕುಳಂ 59, ಮಹಾರಾಜ ಕಾಲೇಜು ಎರ್ನಾಕುಳಂ 60, ಎಸ್ .ಬಿ.ಕಾಲೇಜು ಚಂಗನಾಶ್ಸೆರಿ 62, ಸೇಂಟ್ ಥಾಮಸ್ ಕಾಲೇಜು ತ್ರಿಶೂರ್ 63, ಸೇಂಟ್ ಜೋಸೆಫ್ಸ್ ಕಾಲೇಜು ದೇವಗಿರಿ 78, ಸಿಎಂಎಸ್ ಕಾಲೇಜು ಕೊಟ್ಟಾಯಂ 81, ಸರ್ಕಾರಿ ವಿಕ್ಟೋರಿಯಾ ಕಾಲೇಜು ಪಾಲಕ್ಕಾಡ್ 85, ಬಿಷಪ್ ಕುರಿಯಾಲಚೇರಿ ಮಹಿಳಾ ಕಾಲೇಜು ಅಮಲಗಿರಿ 89, ಫಾತಿಮಾ ಮಾತಾ ನ್ಯಾಷನಲ್ ಕಾಲೇಜು ಕೊಲ್ಲಂ 92, ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಅಲುವಾ 97 ಕೇರಳದ ಇತರ ಶ್ರೇಣಿಗಳು.
ಎನ್.ಐ.ಆರ್.ಎಫ್ ಶ್ರೇಯಾಂಕವು ಒಟ್ಟಾರೆ, ವಿಶ್ವವಿದ್ಯಾಲಯ, ಕಾಲೇಜು, ಸಂಶೋಧನಾ ಸಂಸ್ಥೆಗಳು, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ, ಕಾನೂನು ಮತ್ತು ವಾಸ್ತುಶಿಲ್ಪದಂತಹ 11 ವಿಭಾಗಗಳಲ್ಲಿದೆ. ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಎಂ.ಜಿ. 30 ನೇ, ಕೇರಳ 40 ನೇ, ಹಾಗೂ ಸಿ.ಯು.ಎಸ್.ಎಸ್.ಟಿ 41 ನೇ ಮತ್ತು ಕ್ಯಾಲಿಕಟ್ 69 ನೇ ಸ್ಥಾನದಲ್ಲಿದೆ. ತಿರುವನಂತಪುರಂ ಸಿಇಟಿ ಆರ್ಕಿಟೆಕ್ಚರ್ ವಿಭಾಗದಲ್ಲಿ 14ನೇ ಯಾರ್ಂಕ್ ಗಳಿಸಿದೆ.
ಉತ್ತಮ ಪ್ರಗತಿಗಾಗಿ ಶ್ರಮಿಸಿದ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು, ಕಾಲೇಜು ಅಧಿಕಾರಿಗಳು, ರಕ್ಷಕ ಸಮಿತಿಗಳು ಮತ್ತು ವಿದ್ಯಾರ್ಥಿ ಸಮುದಾಯವನ್ನು ಸಚಿವೆ ಆರ್ ಬಿಂದು ಅಭಿನಂದಿಸಿರುವರು.