ಐಇಟಿ ಇಂಡಿಯಾ ಸ್ಕಾಲರ್‌ಶಿಪ್ ಅವಾರ್ಡ್ಸ್ 2022
ವಿವರ: ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಐಇಟಿ), ಪದವಿಪೂರ್ವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅವರ ಸೃಜನಶೀಲತೆ, ನಾವೀನ್ಯತೆ, ನಾಯಕತ್ವ ಮತ್ತು ಶ್ರೇಷ್ಠತೆಯನ್ನು ಪುರಸ್ಕರಿಸಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅರ್ಹತೆ: ಎಐಸಿಟಿಇ / ಯುಜಿಸಿ ಅನುಮೋದಿತ ಸಂಸ್ಥೆಯಲ್ಲಿ ಪೂರ್ಣ ಸಮಯದ ನಿಯಮಿತ ಪದವಿಪೂರ್ವ ಎಂಜಿನಿಯರಿಂಗ್ (ಯಾವುದೇ ಕ್ಷೇತ್ರದಲ್ಲಿ) 1,2,3 ಮತ್ತು 4ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2ನೇ ವರ್ಷದಲ್ಲಿ ಬಿ.ಟೆಕ್ ಕೋರ್ಸ್‌ಗೆ ಸೇರುವ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಮುಕ್ತವಾಗಿದೆ. ಅವರು ಒಂದೇ ಪ್ರಯತ್ನದಲ್ಲಿ ಎಲ್ಲಾ ಸಾಮಾನ್ಯ ಕ್ರೆಡಿಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರು ಇಲ್ಲಿಯವರೆಗೆ ತೆರವುಗೊಳಿಸಿದ ಸೆಮಿಸ್ಟರ್‌ಗಳಲ್ಲಿ 10-ಪಾಯಿಂಟ್ ಸ್ಕೇಲ್‌ನಲ್ಲಿ ಕನಿಷ್ಠ 6.5 ರ ಒಟ್ಟು ಅಥವಾ ಸಮಾನವಾದ ಸಿಜಿಪಿಎ ಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು.
ಆರ್ಥಿಕ ನೆರವು: ₹ 10,00,000 ಮೌಲ್ಯದ ಸ್ಕಾಲರ್‌ಶಿಪ್ಸ್
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೆ ಕೊನೆದಿನ: 01-08-2022
ಹೆಚ್ಚಿನ ಮಾಹಿತಿಗೆ: www.b4s.in/praja/IET2
ಎಲ್‍ಐಸಿ ಎಚ್‍ಎಫ್‍ಎಲ್ ವಿದ್ಯಾದಾನ್ ಸ್ಕಾಲರ್‌ಶಿಪ್ 2022
ವಿವರ: ಎಲ್‍ಐಸಿ ಎಚ್‍ಎಫ್‍ಎಲ್ 11ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸುವಲ್ಲಿ ಅವರನ್ನು ಬೆಂಬಲಿಸಲು ಅರ್ಜಿಗಳನ್ನು ಆಹ್ವಾನಿಸುತ್ತದೆ. ವಿದ್ಯಾರ್ಥಿ ವೇತನವು ಕಡಿಮೆ ಆದಾಯದ ಮತ್ತು ಬಿಕ್ಕಟ್ಟಿನ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಮೀಸಲಾಗಿದೆ.
ಅರ್ಹತೆ: ಪ್ರಸ್ತುತ 11ನೇ ತರಗತಿ ಮತ್ತು ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 3,60,000 ಕ್ಕಿಂತ ಹೆಚ್ಚಿರಬಾರದು.
ಆರ್ಥಿಕ ನೆರವು: ₹ 20ಸಾವಿರದವರೆಗೆ
ಅರ್ಜಿ ಸಲ್ಲಿಕೆ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆಗೆ ಕೊನೆದಿನ: 30-09-2022
ಹೆಚ್ಚಿನ ಮಾಹಿತಿಗೆ: www.b4s.in/praja/LHVT3