ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮುಂದಿನ 2030ರ ವೇಳೆಗೆ 17 ಮುಖ್ಯ ಲಕ್ಷ್ಯಗಳನ್ನು ಗಮನದಲ್ಲಿರಿಸಿ ಜನಪ್ರತಿನಿಧಿಗಳಿಗೆ ವಿಸ್ಕøತ ತರಬೇತಿ ಶಿಬಿರವನ್ನು ಕೊಡಕ್ಕಾಡ್ ಕದಳಿವನಂನಲ್ಲಿ ಆಯೋಜಿಸಲಾಗಿತ್ತು. ಎರಡು ದಿನಗಳ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಮೊದಲ ಬ್ಯಾಚ್‍ನಲ್ಲಿ 19 ಗ್ರಾಮ ಪಂಚಾಯಿತಿಗಳು ಮತ್ತು ಎರಡು ನಗರ ಸಭೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಎರಡು ಬ್ಯಾಚ್‍ಗಳಲ್ಲಿ 41 ಸ್ಥಳೀಯಾಡಳಿತ ಸಂಸ್ಥೆಗಳು ತರಬೇತಿಯಲ್ಲಿ ಭಾಗವಹಿಸಲಿವೆ. ತರಬೇತಿ ಕಾರ್ಯಕ್ರಮವು ವಿವಿಧ ಹಂತಗಳಲ್ಲಿ ಸೆಪ್ಟೆಂಬರ್ ವರೆಗೆ ಮುಂದುವರಿಯುತ್ತದೆ. ಒಂಬತ್ತು ವಿಷಯಗಳಲ್ಲಿ ಪ್ರಸ್ತುತ ತರಬೇತಿ ನೀಡಲಾಗುತ್ತದೆ. ಕಿಲಾ ತರಬೇತಿಯನ್ನು ಮುನ್ನಡೆಸುತ್ತದೆ. ತರಬೇತಿ ಸಂಯೋಜಕ ಪಪ್ಪನ್ ಕುಟ್ಟಮ್ಮತ್ ಅಧ್ಯಕ್ಷತೆ ವಹಿಸಿದ್ದರು. ಕದಳಿವನಂ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರನ್ ಮಾಸ್ತರ್, ಜನಪರ ಯೋಜನಾ ಸಮಿತಿ ಜಿಲ್ಲಾ ಸಂಚಾಲಕ ಅಜಯ್ ಪನಯಾಲ್ ಮತ್ತಿತರರು ಮಾತನಾಡಿದರು. ಕೇಂದ್ರದ ಸಂಯೋಜಕ ಎಚ್.ಕೃಷ್ಣ, ಕೆ.ರಾಜೀವನ್, ಎಂ.ಮಾಧವನ್ ನಂಬಿಯಾರ್, ಪ್ರಕಾಶನ್ ಚಂದೇರ, ಎಂ.ಪಿ.ಶ್ರೀಮಣಿ ತರಬೇತಿ ನಡೆಸಿದರು.