ಕುಂಬಳೆ: ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಜುಲೈ 21ರಂದು ಚುನಾವಣೆ ನಡೆಯಲಿದೆ. ಕುಂಬಳೆ ಪಂ.ನ ಪೆರ್ವಾಡ್, ಬದಿಯಡ್ಕ ಪಂಚಾಯಿತಿಯ ಪಟ್ಟಾಜೆ, ಪಳ್ಳಿಕೆರೆ ಪಂಚಾಯಿತಿಯ ಪಳ್ಳಿಪುರ, ಕಳ್ಳಾರು ಪಂಚಾಯಿತಿಯ ಅಡಕ್ಕಂ, ಕಾಞಂಗಾಡಿನ ತೋಯಮ್ಮಲ್ ವಾರ್ಡುಗಳಿಗೆ ಮರು ಚುನಾವಣೆ ನಡೆಯಲಿದೆ.
ಎಲ್ಲ ಐದು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ಕುಂಬಳೆ ಪೆರ್ವಾಡ್ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಮುರಳೀಧರ ಯಾದವ್, ಐಕ್ಯರಂಗ ಅಭ್ಯರ್ಥಿಯಾಗಿ ಎಂ.ಜಿ ನಾಸರ್, ಎಡರಂಗದಿಂದ ಎಸ್. ಅನಿಲ್ ಕುಮಾರ್, ಬದಿಯಡ್ಕ ಪಟ್ಟಾಜೆ ವಾರ್ಡಿನಲ್ಲಿ ಬಿಜೆಪಿಯಿಂದ ಮಹೇಶ್ ಪಟ್ಟಾಜೆ, ಎಡರಂಗದಿಂದ ಎಂ. ಮದನನ್, ಕಾಂಗ್ರೆಸ್ನಿಂದ ಶ್ಯಾಮ ಪ್ರಸಾದ್ ಮಾನ್ಯ ರಂಗಕ್ಕಿಳಿದಿದ್ದಾರೆ.
ಪಳ್ಳಿಕೆರೆ ಪಳ್ಳಿಪುರ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಶೈಲಜಾ ಕೂಟಕನಿ, ಕಳ್ಳಾರು ಪಂಚಾಯಿತಿಯ ಅಡಕ್ಕಂ ವಾರ್ಡಿಗೆ ಸುನೇಶ್ ನಾರಾಯಣನ್ ಕರಿಪ್ಪೊಡಿ, ಕಾಞಂಗಾಡು ತೋಯಮ್ಮಲ್ ವಾರ್ಡಿಗೆ ರೇಶ್ಮಾ ಎಂ.ಎ ಅವರನ್ನು ಆಯ್ಕೆ ಮಾಡಲಾಗಿದೆ.