ತ್ರಿಶೂರ್: ತ್ರಿಶೂರ್‍ನಲ್ಲಿ ಯುವಕನೊಬ್ಬನ ಸಾವಿಗೆ ಮಂಗನ ಕಾಯಿಲೆಯೇ ಕಾರಣ ಎಂದು ಶಂಕಿಸಲಾಗಿದೆ. ಚಾವಕ್ಕಾಡ್ ಕುರಿನಿಯೂರಿನ 22ರ ಹರೆಯದ ಯುವಕನ ಸಾವು ಆತಂಕ ಮೂಡಿಸಿದೆ. ಶನಿವಾರ ಬೆಳಿಗ್ಗೆ ಯುವಕ ಮೃತನಾಗಿದ್ದ. ಇದೇ ತಿಂಗಳ 21 ರಂದು ಯುಎಇಯಿಂದ ಆಗಮಿಸಿದ್ದ ಯುವಕ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ. ಯುವಕನ ಅಸ್ವÀಸ್ಥತೆಯ ಹೆಚ್ಚಿನ ಪರೀಕ್ಷೆಗಾಗಿ ಅಲಪ್ಪುಳ ವೈರಾಲಜಿ ಲ್ಯಾಬ್‍ಗೆ ಕಳುಹಿಸಲಾಗಿದೆ.
ಕೇರಳದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮಂಗನ ಕಾಯಿಲೆ ದೃಢಪಟ್ಟಿತ್ತು. ಕೊಲ್ಲಂನ 35 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿತ್ತು. ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚೇತರಿಸಿಕೊಂಡು ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. 72 ಗಂಟೆಗಳ ಮಧ್ಯಂತರದಲ್ಲಿ ಎರಡು ಪರೀಕ್ಷೆಗಳನ್ನು ನಡೆಸಲಾಯಿತು. ಎರಡೂ ಪರೀಕ್ಷೆಗಳು ನೆಗೆಟಿವ್ ಬಂದಿವೆ. ಚರ್ಮದ ಮೇಲೆ ಕಂಡುಬಂದ ಗುಳ್ಳೆಗಳೂ ಸಹ ಸಂಪೂರ್ಣವಾಗಿ ಗುಣವಾಗಿದೆ. 14ರಂದು ಯುಎಇಯಿಂದ ಇವರು ಬಂದಿದ್ದರು. .
ಇದೇ ವೇಳೆ ಕೇರಳದಲ್ಲಿ ವರದಿಯಾಗಿರುವ ಮಂಕಿಪಾಕ್ಸ್ ವೈರಸ್ ಹರಡುವ ಸಾಮಥ್ರ್ಯ ಹೊಂದಿಲ್ಲ ಎಂದು ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಎ.2 ರೂಪಾಂತರ ಕಂಡುಬಂದಿದೆ. ಕೇರಳದಲ್ಲಿ ದೃಢಪಟ್ಟ ಎರಡು ಪ್ರಕರಣಗಳ ಮಾದರಿಗಳನ್ನು ಅನುವಂಶಿಕ ಅನುಕ್ರಮಕ್ಕೆ ಒಳಪಡಿಸಲಾಗಿದೆ. 75 ದೇಶಗಳಲ್ಲಿ 20,000 ಕ್ಕೂ ಹೆಚ್ಚು ಜನರು ಮಂಗನ ಕಾಯಿಲೆಯಿಂದ ಬಳಲುತ್ತಿದ್ದಾರೆ.
ತ್ರಿಶೂರ್‍ನಲ್ಲಿ 22 ವರ್ಷದ ಯುವಕ ಮೃತ್ಯು: ಮಂಗನ ಕಾಯಿಲೆ ಕಾರಣ ಎಂದು ಶಂಕೆ
0
ಜುಲೈ 30, 2022