HEALTH TIPS

ಓಮೈಕ್ರಾನ್‌ನ ಬಿಎ.2.38 ವೈರಾಣುವಿನಿಂದ ಗಂಭೀರ ಪರಿಣಾಮ ಇಲ್ಲ: ಇನ್ಸಾಕಾಗ್

           ನವದೆಹಲಿ: ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎ.2ರ ಮತ್ತೊಂದು ತಳಿ ಬಿಎ.2.38 ವೈರಾಣು ಅಷ್ಟೇನು ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾಗಿಲ್ಲ. ಆದರೆ, ಇದರ ಸಹವರ್ತಿ ರೋಗಗಳ ಕಾರಣದಿಂದಾಗಿ ಕೆಲವು ಸಾವುಗಳು ಸಂಭವಿಸಿವೆ' ಎಂದು 'ಇನ್ಸಾಕಾಗ್' ತನ್ನ ಬುಲೆಟಿನ್‌ನಲ್ಲಿ ಹೇಳಿದೆ.

             ಭಾನುವಾರ ಜೂನ್‌ 20ರ ಬುಲೆಟಿನ್‌ ಬಿಡುಗಡೆ ಮಾಡಿರುವ ಇನ್ಸಾಕಾಗ್ (ಐಎನ್‌ಎಸ್‌ಎಸಿಇಜಿ- ದಿ ಇಂಡಿಯನ್‌ ಸಾರ್ಸ್‌-ಕೋವ್‌-2 ಜಿನೊಮಿಕ್ಸ್‌ ಕನ್ಸೊರ್ಟಿಯಂ) ಹಲವು ಬಿಎ.2 ಪ್ರಕರಣಗಳನ್ನು ಬಿಎ.2.38 ಎಂದು ಮರು ವರ್ಗೀಕರಿಸಲಾಗಿದೆ. ಬಿಎ.2.38 ತಳಿಯು ಇತ್ತೀಚಿನ ಅನುಕ್ರಮದ ವಿಂಗಡಣೆಯಲ್ಲಿ ಪ್ರಚಲಿತದಲ್ಲಿರುವ ಉಪ ತಳಿಯಾಗಿದೆ. ಇದರ ವರ್ತನೆ ಗಮನಿಸಿದರೆ ಕೋವಿಡ್‌ ಹರಡುವಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಆದಾಗ್ಯೂ ಕೋವಿಡ್‌ ತಡೆಗೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಲು ಶಿಫಾರಸು ಮಾಡಿದೆ ಎಂದು ಅದು ಹೇಳಿದೆ.

ಇನ್ಸಾಕಾಗ್ ತನ್ನ ಜೂನ್‌ 13ರ ಬುಲೆಟಿನ್‌ ಅನ್ನೂ ಇದೇ ವೇಳೆ ಬಿಡುಗಡೆ ಮಾಡಿದೆ. ಬಿಎ.2 ತಳಿಯು ಪ್ರಬಲ ವೈರಾಣು ತಳಿಯಾಗಿ ಮುಂದುವರಿದಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಏರಿಕೆಯಾಗಿಲ್ಲ. ಆದರೂ, ಇದನ್ನು ತುಂಬಾ ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದು ಬುಲೆಟಿನ್‌ನಲ್ಲಿ ಹೇಳಿದೆ.

                ಮೇ 30ರ ಮತ್ತೊಂದು ಬುಲೆಟಿನ್‌ನಲ್ಲಿ ಬಿಎ.4ರ ಐದು ಪ್ರಕರಣಗಳು ಮತ್ತು ಬಿಎ.5ರ ಮೂರು ಪ್ರಕರಣಗಳು ದೇಶದಲ್ಲಿ ಇಲ್ಲಿಯವರೆಗೆ ವರದಿಯಾಗಿವೆ ಎಂದು ಇನ್ಸಾಕಾಗ್‌ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries