ಪಾಲಕ್ಕಾಡ್: ಆರೆಸ್ಸೆಸ್ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ 26 ಆರೋಪಿಗಳಿದ್ದಾರೆ. ಏಪ್ರಿಲ್ 16, 2022 ರಂದು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಶ್ರೀನಿವಾಸನ್ ಅವರನ್ನು ಕೊಲೆಗೈದಿದ್ದರು. ಪಾಪ್ಯುಲರ್ ಫ್ರಂಟ್ ನಾಯಕ ಜುಬೇರ್ ಹತ್ಯೆಯ ಬಳಿಕ ಈ ಪ್ರಕರಣ ನಡೆದಿತ್ತು.
ಮೂರು ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ತಂಡವು ಮಹಡಿಯ ಅಂಗಡಿಯಲ್ಲಿ ನಿಂತಿದ್ದ ಶ್ರೀನಿವಾಸನ್ ಅವರನ್ನು ಕಡಿದು ಹತ್ಯೆಗೈದಿತ್ತು. ಜುಬೇರ್ ಶವ ಇರಿಸಲಾಗಿದ್ದ ಜಿಲ್ಲಾ ಆಸ್ಪತ್ರೆಯ ಶವಾಗಾರದ ಬಳಿಯೇ ಶ್ರೀನಿವಾಸನ್ ಹತ್ಯೆಗೆ ಸಂಚು ನಡೆದಿದೆ. ಈ ಬಗ್ಗೆ ಪೋಲೀಸರಿಗೆ ಸಾಕ್ಷ್ಯವೂ ಸಿಕ್ಕಿದೆ.
ಶ್ರೀನಿವಾಸನ್ ಅವರ ದೇಹದ ಮೇಲೆ ಸುಮಾರು 10 ಆಳವಾದ ಗಾಯಗಳಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ತಲೆಗೆ ಮೂರು ಗಾಯಗಳಾಗಿದ್ದು, ಕೈಕಾಲುಗಳಲ್ಲಿ ಆಳವಾದ ಗಾಯಗಳಾಗಿದ್ದವು.
ಆದರೆ ಕೊಲೆಯ ಪ್ರಮುಖ ಮಾಸ್ಟರ್ ಮೈಂಡ್ ರಶೀದ್ ಸೇರಿದಂತೆ ಸುಮಾರು 10 ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ನಡೆದಿರುವ ಕೊಲೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದರೂ, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳನ್ನೂ ಸಂಪೂರ್ಣವಾಗಿ ಬಂಧಿಸಲು ಪೋಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.