HEALTH TIPS

ಕನ್ಹಯ್ಯ ಹತ್ಯೆ ಕೇಸ್​: ಬೈಕ್​ಗೆ 2611 ನಂಬರ್ ಪಡೆಯಲು ಆರೋಪಿಗಳು ಕೊಟ್ಟ ಹೆಚ್ಚುವರಿ ಹಣ ಇಷ್ಟಂತೆ.

               ಉದಯಪುರ: ಪ್ರವಾದಿ ಮೊಹಮ್ಮದ್​ ಕುರಿತು ಮಾತನಾಡಿದ್ದ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್​ ರುಂಡವನ್ನು ಕಡಿದಿರುವ ಘಟನೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.

              ಕ್ರೂರಿಗಳಿಗೆ ಪಾಕಿಸ್ತಾನ ಹಾಗೂ ಐಸಿಸ್​ ಲಿಂಕ್​ ಇರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಬೆನ್ನಲ್ಲೇ ಮತ್ತಷ್ಟು ಭಯಾನಕ ಕೃತ್ಯಗಳು ಹೊರಕ್ಕೆ ಬರುತ್ತಿವೆ.

              ರಾಜಸ್ಥಾನ ಪೊಲೀಸರ ಹೇಳಿಕೆಯ ಪ್ರಕಾರ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ರಿಯಾಜ್​ ಅಖ್ತರಿ ಎಂಬಾತ 2611 ಸಂಖ್ಯೆಯ ಬೈಕ್​ ನಂಬರ್ ಪ್ಲೇಟ್​​ ಪಡೆಯಲು ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದ ಎಂದು ತಿಳಿದುಬಂದಿದೆ. ಆರೋಪಿಗಳಿಗೆ ಐಸಿಸ್​ ಉಗ್ರರ ಜೊತೆ ಸಂಪರ್ಕ ಇದೆ ಎಂಬುದು ತಿಳಿದುಬಂದ ಬೆನ್ನಲ್ಲೇ ಈ ಸಂಗತಿಯು ಬಯಲಾಗಿದೆ.

               ಟೈಲರ್​ ಕನ್ಹಾಯ್ಯ ಲಾಲ್​ರನ್ನು ಕೊಲೆ ಮಾಡಿ ಆರೋಪಿಗಳಿಬ್ಬರು ಬೈಕ್​ ಮೇಲೆ ಎಸ್ಕೇಪ್​ ಆಗುವಾಗ ಉದಯಪುರದಿಂದ 45 ಕಿ.ಮೀ. ದೂರದಲ್ಲಿ​ ಅವರಿಬ್ಬರನ್ನು ಪೊಲೀಸರು ಬಂಧಿಸಿದರು. ಬೈಕ್​ ಅನ್ನು ಸೀಜ್​ ಮಾಡಲಾಗಿದ್ದು, ಆ ಬೈಕ್​ ಪೊಲೀಸ್​ ಠಾಣೆಯಲ್ಲಿ ಇಡಲಾಗಿದೆ. ಆ ಬೈಕ್​ ಅನ್ನು ಅಖ್ತರಿ 2013ರಲ್ಲಿ ಕೊಂಡುಕೊಂಡಿದ್ದ. 2014ರಲ್ಲಿ ಅದರ ಇನ್ಸುರೆನ್ಸ್​ ಅವಧಿ ಮುಗಿದಿತ್ತು. ಪಾಸ್​ಪೋರ್ಟ್​ ಮಾಹಿತಿ ಪ್ರಕಾರ ರಿಯಾಜ್​ 2017ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ. ಅಲ್ಲದೆ, ಆತ ಪಾಕಿಸ್ತಾನಕ್ಕೂ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.

                ಉದಯಪುರ ಟೈಲರ್​ ಹತ್ಯೆಯ ಬಗ್ಗೆ ಹೆಚ್ಚಿನ ಸುಳಿವು ಪಡೆಯಲು ಬೈಕ್‌ನ ನಂಬರ್ ಪ್ಲೇಟ್ ಸಹಾಯ ಮಾಡುತ್ತದೆ ಎಂದು ಪೊಲೀಸರು ನಂಬಿದ್ದಾರೆ. ಮಾರ್ಚ್ 30ರಂದು ಜೈಪುರದಲ್ಲಿ ನಡೆದ ಸರಣಿ ಸ್ಫೋಟದ ಸಂಚಿನಲ್ಲಿ ಇವರೂ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇವರು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಮೂಲಕ ಐಸಿಸ್‌ನ ರಿಮೋಟ್ ಸ್ಲೀಪರ್ ಸಂಘಟನೆಯಾದ ಅಲ್ ಸುಫಾಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಿಯಾಜ್​ ಅಖ್ತರಿ ಉದಯಪುರದಲ್ಲಿರುವ ಅಲ್​ ಸುಫಾದ ಮುಖ್ಯಸ್ಥನಾಗಿದ್ದ.

               ಗೌಸ್​ ಮೊಹಮ್ಮದ್​ನಿಗೆ ಸೇರಿರುವ ಈ ಬೈಕ್​ ಸಂಖ್ಯೆ 2611. ಮೇಲ್ನೋಟಕ್ಕೆ ಈ ಸಂಖ್ಯೆಯಲ್ಲಿ ಏನು ವಿಶೇಷತೆ ಇದೆ ಎನ್ನಿಸಬಹುದು. ಆದರೆ ಇದರ ಆಳಕ್ಕೆ ಹೋದರೆ ಗೊತ್ತಾಗುವುದು ಭಾರಿ ಸಂಚು. 26/11 ಎಂದರೆ ಅದು ಮುಂಬೈ ತಾಜ್ ಹೋಟೆಲ್ ಮೇಲೆ 2013ರಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿ. ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ದಾಳಿಗೂ ಈ ಬೈಕ್​ ಸಂಖ್ಯೆಗೂ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. 175 ಮಂದಿಯನ್ನು ಬಲಿ ಪಡೆದಿದ್ದ ಈ ದಾಳಿಗೂ, ಟೈಲರ್​ ಹತ್ಯೆ ಆರೋಪಿಗಳಿಗೂ ಸಂಬಂಧ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

                 ಈ ಹಿಂದೆ ಬಂಧನಕ್ಕೊಳಗಾಗಿದ್ದ ಐಸಿಸ್ ಭಯೋತ್ಪಾದಕ ಮುಜೀಬ್ ಜೊತೆಗೂ ರಿಯಾಜ್​ಗೆ ಸಂಪರ್ಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಈಗ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries