ಕ್ವೀನ್ಸ್ ಪಾರ್ಕ್ ಓವಲ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತದ ಪರ ಆವೇಶ್ ಖಾನ್ ಪದಾರ್ಪಣೆ ಮಾಡಲಿದ್ದಾರೆ.
ಈಗಾಗಲೇ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಲು ಕಾತುರವಾಗಿ ನಿಂತಿದೆ. ಈ ಮೈದಾನವು ಕಳೆದ ಪಂದ್ಯದಂತೆ ಹೆಚ್ಚು ಬ್ಯಾಟ್ಸ್ ಮನ್ ಗಳಿಗೆ ಸಹಾಯಕವಾಗಲಿದ್ದು, ಹೆಚ್ಚು ರನ್ ಗಳ ಸುರಿಮಳೆ ಹರಿಯುವ ನಿರೀಕ್ಷೆಯಿದೆ.
ಈ ಪಂದ್ಯದಲ್ಲಿ ಭಾರತದ ಪರ ಆವೇಶ್ ಖಾನ್ ಪದಾರ್ಪಣೆ ಮಾಡಲಿದ್ದು, ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.
ತಂಡಗಳು ಇಂತಿವೆ:
ಭಾರತ
ಶಿಖರ್ ಧವನ್ (ನಾಯಕ), ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್,
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್
ಠಾಕೂರ್, ಯುಜವೇಂದ್ರ ಚಹಲ್, ಮಹಮದ್ ಸಿರಾಜ್, ಆವೇಶ್ ಖಾನ್ (ಪದಾರ್ಪಣೆ)
ವೆಸ್ಟ್ ಇಂಡೀಸ್:
ಕೆ ಮೇಯರ್ಸ್, ಎಸ್ ಹೋಪ್ (ವಿಕೆಟ್ ಕೀಪರ್), ಎಸ್ ಬ್ರೂಕ್ಸ್, ಎನ್ ಪೂರನ್ (ನಾಯಕ), ಬಿ
ಕಿಂಗ್, ಆರ್ ಪೊವೆಲ್, ಆರ್ ಶೆಫರ್ಡ್, ಎ ಹೋಸೇನ್, ಜೆ ಸೀಲ್ಸ್, ಎಚ್ ವಾಲ್ಷ್, ಎ
ಜೋಸೆಫ್