ನವದೆಹಲಿ: ದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ ಮದ್ಯ ಸೇವನೆ ಹೆಚ್ಚಳವಾಗಿದೆ ಎಂದು ವೈದ್ಯಕೀಯ ನಿಯತಕಾಲಿಕೆ 'ಲ್ಯಾನ್ಸೆಟ್' ಅಧ್ಯಯನ ವರದಿಯಿಂದ ತಿಳಿದುಬಂದಿದೆ.
ನವದೆಹಲಿ: ದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ ಮದ್ಯ ಸೇವನೆ ಹೆಚ್ಚಳವಾಗಿದೆ ಎಂದು ವೈದ್ಯಕೀಯ ನಿಯತಕಾಲಿಕೆ 'ಲ್ಯಾನ್ಸೆಟ್' ಅಧ್ಯಯನ ವರದಿಯಿಂದ ತಿಳಿದುಬಂದಿದೆ.
ಪುರುಷರಲ್ಲಿ ವಿವಿಧ ವಯೋಮಾನದವರಲ್ಲಿ ಮದ್ಯ ಸೇವನೆ ಹೆಚ್ಚಾಗಿದೆ.
ಮತ್ತೊಂದೆಡೆ, ಮಹಿಳೆಯರಲ್ಲಿ 15ರಿಂದ 39 ವರ್ಷ ವಯಸ್ಸಿನವರಲ್ಲಿ ಮದ್ಯ ಸೇವನೆ ಪ್ರಮಾಣ ಶೇ 0.08ರಷ್ಟು ಹೆಚ್ಚಾಗಿದೆ. 40ರಿಂದ 64 ವರ್ಷ ವಯಸ್ಸಿನವರಲ್ಲಿ ಶೇ 0.15ರಷ್ಟು ಹೆಚ್ಚಾಗಿದೆ. 65 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಮಾತ್ರ ಮದ್ಯ ಸೇವನೆ ಪ್ರಮಾಣ ಇಳಿಕೆಯಾಗಿದೆ.
ಮದ್ಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆಯೂ ಅಧ್ಯಯನ ಲೆಕ್ಕಾಚಾರ ಹಾಕಿದೆ. ಮದ್ಯಪಾನ ಮಾಡದವರ ಜತೆ ಹೋಲಿಸಿದರೆ ಮದ್ಯಪಾನ ಮಾಡುವವರ ಆರೋಗ್ಯಕ್ಕಿರುವ ಅಪಾಯಗಳ ಬಗ್ಗೆ ಉಲ್ಲೇಖಿಸಿದೆ.