ಕಣ್ಣೂರು: ಕೊಚ್ಚಿಯಲ್ಲಿ ಅಲ್ಲಿ ಈವರೆಗೆ ಸಂಚಾರ ಮಾಡದ ಆಟೊವೊಂದಕ್ಕೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಿ ಪೋಲೀಸರು ಪತ್ರ ಹೊರಡಿಸಿದ್ದಾರೆ. ಪಯ್ಯನ್ನೂರಿನಲ್ಲಿ ಸರ್ವೀಸ್ ನಡೆಸುವ ಕೆ.ಎಲ್. 59 ಡಿ 7941 ಆಟೋರಿಕ್ಷಾಕ್ಕೆ ಎಡಪಳ್ಳಿ ಪೋಲೀಸರು ದಂಡ ವಿಧಿಸಿ ಸಮನ್ಸ್ ಜಾರಿ ಮಾಡಿದ್ದಾರೆ. ಎರ್ನಾಕುಳಂ ಟ್ರಾಫಿಕ್ ಪೋಲೀಸರು ವಝಕಳದಲ್ಲಿ ಅಕ್ರಮ ಪಾರ್ಕಿಂಗ್ ತೋರಿಸಿ ನೋಟಿಸ್ ಕಳುಹಿಸಿದ್ದಾರೆ.
ಪಯ್ಯನ್ನೂರು ಕಾರ ಎಂಬಲ್ಲಿಯ ಮಧುಸೂದನ್ ಎಂಬವರ ಮಾಲಕತ್ವದ ಆಟೋಗೆ ನೋಟೀಸು ನೀಡಲಾಗಿದೆ. ಅವರ ಸಹೋದರ ಪಿ. ಶ್ರೀಜೇಶ್ ಆಟೋ ಚಾಲಕನಾಗಿದ್ದಾನೆ. ಮಧುಸೂದನ್ ಹೆಸರಿನಲ್ಲಿ ಶುಕ್ರವಾರ ಸಮನ್ಸ್ ಬಂದಿದೆ.
ಇದರಿಂದ ಈ ಸಹೋದರರು ಆತಂಕಗೊಂಡಿದ್ದಾರೆ. ಪೋಲೀಸರು ತಪ್ಪು ಮಾಡಿದ್ದಾರೆಯೇ ಅಥವಾ ಬೇರೆ ವಾಹನ ಈ ನಂಬರ್ ಸರ್ವಿಸ್ ಮಾಡುತ್ತಿದೆಯೇ ಎಂಬುದು ಸಹೋದರರ ಅನುಮಾನ.
ಕಳೆದ ವರ್ಷ ಡಿಸೆಂಬರ್ 29 ರಂದು ವಾಹನ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೆ ಆಟೋ ಸಮೇತ ಎರ್ನಾಕುಳಂಗೆ ಹೋಗಿಲ್ಲ ಎಂದು ಚಾಲಕ ಶ್ರೀಜೇಶ್ ಹಠ ಹಿಡಿದಿದ್ದಾರೆ. ನಿನ್ನೆ ಪ್ರಕರಣದ ಬಗ್ಗೆ ವಿಚಾರಿಸಿದಾಗ ಪೋಲೀಸರು ಪರಿಹಾರ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿರುವುದಾಗಿ ಸಹೋದರರು ಹೇಳುತ್ತಾರೆ.