HEALTH TIPS

3000 ಸಾವಿರ ವರ್ಷಗಳ ಹಿಂದೆ ಮೆದುಳಿನ ಗಾತ್ರ ದೊಡ್ಡದಿತ್ತು, ಕುಗ್ಗುತ್ತಿದೆ ಬ್ರೈನ್ ಗಾತ್ರ, ಕಾರಣವೇನು?

 ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ಮಾನವನಿಗೆ ಮೆದುಳು ಇಲ್ಲದಿದ್ದರೆ ಮಾನವ ಇದ್ದು ವೇಸ್ಟ್. ಯಾಕೆಂದರೆ ಮಸ್ತಿಷ್ಕ, ಬ್ರೈನ್ ಎಂದೆಲ್ಲಾ ಹೆಸರಿನಿಂದ ಕರೆಯಲಾಗುವ ಮೆದುಳು ಮಾನವನ ಪ್ರತೀ ಕ್ಷಣದಲ್ಲೂ ಮುಖ್ಯ. ಯೋಚನೆ, ಚಟುವಟಿಕೆ ಮಾಡಲು ಮೆದುಳು ದಾರಿ ದೀಪವಿದ್ದಂತೆ. ಆದರೆ ನಿಮಗೊಂದು ಗೊತ್ತಾ ನಮ್ಮ ಮೆದುಳು ಮೂರು ಸಾವಿರ ವರ್ಷಗಳ ಹಿಂದೆ ಗಾತ್ರದಲ್ಲಿ ದೊಡ್ಡದಿದ್ದಂತೆ. ಆದರೆ ಕಾಲಕ್ರಮೇಣ ಅದರ ಗಾತ್ರ ಕುಗ್ಗಿದೆಯಂತೆ. ಯಾಕೆ ಮನುಷ್ಯನ ಮೆದುಳು ಗಾತ್ರದಲ್ಲಿ ಕುಗ್ಗಿದೆ? ಇದಕ್ಕೆ ಕಾರಣವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮೆದುಳಿನ ಗಾತ್ರದಲ್ಲಿ ಕುಗ್ಗಿದ್ದೇಕೆ?

ಮೂರು ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರ ಮೆದುಳುಗಳ ಗಾತ್ರ ದೊಡ್ಡದಿತ್ತಂತೆ. ಆದರೆ ಮೂರು ಸಾವಿರ ವರ್ಷಗಳ ಬಳಿಕ ಅಂದರೆ ಬಳಿಕದ ತಲೆಮಾರಿನ ಮಾನವರುಗಳ ಮೆದುಳು ಕುಗ್ಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಇದಕ್ಕೆ ಪುರಾವೆ ಎಂಬಂತೆ ಅತಿ ದೊಡ್ಡ ಮಿದುಳನ್ನು ಹೊಂದಿರುವ ಹೋಮೋ ಸೇಪಿಯನ್ಸ್ ಯುರೋಪ್ ನಲ್ಲಿ 20,000 ರಿಂದ 30,000 ವರ್ಷಗಳ ಹಿಂದೆ ವಾಸಿಸುತ್ತಿದ್ದರಂತೆ.

ಕ್ರೋ-ಮ್ಯಾಗ್ನನ್ಸ್ ಎಂದು ಕರೆಯಲ್ಪಡುವ ಅವರು ಬ್ಯಾರೆಲ್ ಎದೆಗಳನ್ನು ಹೊಂದಿದ್ದರು ಮತ್ತು ಅಗಾಧವಾದ ಹಲ್ಲುಗಳನ್ನು ಹೊಂದಿರುವ ದೊಡ್ಡದಾದ ದವಡೆಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಜೊತೆಗೆ ಅವ್ರ ಮೆದುಳುಗಳು ಕೂಡ ಗಾತ್ರದಲ್ಲಿ ದೊಡ್ಡದಿತ್ತಂತೆ. ಇನ್ನು ಮೆದುಳಿನ ಗಾತ್ರದ ಬಗ್ಗೆ ಸಂಶೋಧನೆ ಹಾಗೂ ವಿವಿಧ ಅಧ್ಯಯನಗಳನ್ನು ನಡೆಸಿ ಮೆದುಳಗಳ ಈ ಬೆಳವಣಿಗೆ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಇನ್ನು ಯಾವ ಕಾರಣಕ್ಕೆ ಮೆದುಳು ಈಗ ಚಿಕ್ಕದಾಗಿದೆ ಹಾಗೂ ಪ್ಲೆಸ್ಟೊಸೀನ್ ಕಾಲದ ಪೂರ್ವಜರ ಮೆದುಳು ದೊಡ್ಡದಿತ್ತು ಎನ್ನುವುದಕ್ಕೆ ಸಂಶೋಧನೆಗಳಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ .

ಆದರೆ ಅಧ್ಯಯನದಿಂದ ಮೆದುಳಿನ ಗಾತ್ರ ಕುಗ್ಗಿರುವುದು ಯೋಚನಾಲಹರಿಯಲ್ಲಿ ಬದಲಾಗಿರುವುದನ್ನು ಸಂಶೋಧಕರು ಊಹಿಸಿದ್ದಾರೆ. ಅಲ್ಲದೇ ಈ ಸಂಶೋಧನೆಯಿಂದ ಮನುಷ್ಯನ ಬುದ್ದಿವಂತಿಕೆ, ಮನುಷ್ಯನ ಮೆದುಳಿನ ಬಳಕೆಯ ಬಗ್ಗೆ ಅಧ್ಯಯನದಲ್ಲಿ ಕೆಲವೊಂದು ಮಾಹಿತಿ ಲಭ್ಯವಾಗಿದೆ. ಆದರೆ ಸಂಶೋಧಕರಿಗೆ ಮೆದುಳು ಯಾಕೆ ಕುಗ್ಗುತ್ತಿದೆ ಹಾಗೂ ಈ ಹಿಂದೆ ಹಿಗ್ಗಿದೆ ಎನ್ನುವ ಬಗ್ಗೆ ಇನ್ನು ನಿಗೂಢವಾಗೇ ಉಳಿದಿದೆ. ಅದಾಗ್ಯೂ ಕೆಲವೊಂದು ಸಂಶೋಧನೆ ಮೆದುಳಿನ ಗಾತ್ರ ಕುಗ್ಗುವುದಕ್ಕೆ ಹವಾಮಾನದಲ್ಲಿನ ತಾಪಮಾನ ಏರಿಕೆ ಕೂಡ ಒಂದು ಕಾರಣ ಎಂದು ಹೇಳಿದ್ದಾರೆ.

ಯಾಕೆಂದರೆ ತಾಪಮಾನ ಏರಿದಂತೆ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಕುಗ್ಗುತ್ತಿದ್ದು ಈ ಪ್ರಕ್ರಿಯೆಯಲ್ಲಿ ಮೆದುಳು ಚಿಕ್ಕದಾಗಿದೆ ಎಂದು ಅಂದಾಜಿಸಿದ್ದಾರೆ. ಆದರೆ ತಪಾಮಾನ ಸಮತೋಲನ ಇರುವ ದೇಶದಲ್ಲೂ ಮನುಷ್ಯರ ಮೆದುಳು ಕುಗ್ಗಿರುವುದರಿಂದ ಇದೇ ಕಾರಣಕ್ಕೆ ಬ್ರೈನ್ ಶ್ರೀಂಕಿಂಗ್ ಆಗುತ್ತಿದೆ ಎಂದು ಹೇಳಲಾಗದು ಎನ್ನಲಾಗಿದೆ.

ಇನ್ನು ಮತ್ತೊಂದು ಸಂಶೋಧನೆ ಪ್ರಕಾರ, ಶತಮಾನಗಳ ಹಿಂದಿನ ಜನರಿಗೆ ಕೃಷಿ ಚಟುವಟಿಕೆ ಬಗ್ಗೆ ಸರಿಯಾಗಿ ಮಾಹಿತಿ ಇರಲಿಲ್ಲ. ದೇಹಕ್ಕೆ ಯಾವ ಆಹಾರ ಸೇವಿಸಬೇಕು ಎನ್ನುವ ಅರಿವು ಇರ್ಲಿಲ್ಲ. ಮೆದುಳಿಗೆ ಬೇಕಾದ ಪೌಷ್ಟಿಕ ಆಹಾರಗಳು ಸರಿಯಾಗಿ ಸೇವಿಸದ ಹಿನ್ನೆಲೆ ಈ ರೀತಿ ಕುಗ್ಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೂ ಇದು ಪಕ್ಕಾ ಎಂದು ಹೇಳಲಾಗದು ಎನ್ನಲಾಗಿದೆ.

ಗಾತ್ರದಲ್ಲಿ ಎಷ್ಟು ಕುಗ್ಗಿದೆ!

ಇನ್ನು ಮೆದುಳು ಕುಗ್ಗುವುದಕ್ಕೆ ಇದೇ ಕಾರಣ ಎಂದು ಯಾವ ಸಂಶೋಧಕರಿಗೂ ಉತ್ತರ ಸಿಕ್ಕಿಲ್ಲ. ಆದರೆ ಮೆದುಳಿನ ಗಾತ್ರದಲ್ಲಿ ಬದಲಾಗಿರುವುದು ಮಾತ್ರ ನಿಜ ಎನ್ನುವುದು ಸಂಶೋಧಕರ ವಾದವಾಗಿದೆ. ತಜ್ಞರ ಪ್ರಕಾರ ಕಳೆದ 20,000 ವರ್ಷಗಳಲ್ಲಿ ಮಾನವನ ಮೆದುಳಿನ ಸರಾಸರಿ ಪರಿಮಾಣವು 1,500 ಘನ ಸೆಂಟಿಮೀಟರ್‌ಗಳಿಂದ 1,350 ಘನ ಸೆಂಟಿಮೀಟರ್‌ಗಳವರೆಗೆ ಕುಗ್ಗಿದೆ, ಇದು ಟೆನ್ನಿಸ್ ಚೆಂಡಿನ ಗಾತ್ರವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಚೀನಾ, ಯುರೋಪ್, ಆಫ್ರಿಕಾ ಸೇರಿ ಎಲ್ಲಾ ದೇಶಗಳಲ್ಲಿ ಮಾನವರ ಮೆದುಳಿನಲ್ಲಿ ಬದಲಾಗಿದೆ ಎಂದಿದ್ದಾರೆ. ಮುಂದಿನ 20,000 ವರ್ಷಗಳಲ್ಲಿ ನಮ್ಮ ಮೆದುಳು ಆ ಪ್ರಮಾಣದಲ್ಲಿ ಕ್ಷೀಣಿಸುತ್ತಾ ಹೋದರೆ, ಮೆದುಳಿನ ಗಾತ್ರ ಕೇವಲ 1,100 ಘನ ಸೆಂಟಿಮೀಟರ್‌ಗಳಾಗಿ ಉಳಿಯಲಿದೆ. ಸದ್ಯ ಈ ರೀತಿಯ ಕುಗ್ಗುವಿಕೆಯಿಂದ ಮನುಷ್ಯರ ಯೋಚನಲಾಹರಿ ಮೇಲೆ ಪರಿಣಾಮ ಬೀರುವ ಸಾಧ್ತತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಯಾಕೆಂದರೆ ಮೇಕೆ, ಹಂದಿಯಂತಹ ಪ್ರಾಣಿಗಳಲ್ಲಿ ಮೆದುಳಿನ ಗಾತ್ರ ಚಿಕ್ಕದಿದೆ ಹೀಗಾಗಿ ಚಿಕ್ಕ ಗಾತ್ರವೂ ಮೆದುಳಿನ ಯೋಚನಾಲಹರಿ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ದೊಡ್ಡ ಮೆದುಳು ಹೊಂದಿದವರು ಅತೀ ಬುದ್ದಿವಂತರು ಮತ್ತು ಭಾರೀ ನೆನಪಿನ ಶಕ್ತಿಯನ್ನು ಹೊಂದಿದವರೆಂದು ಹೇಳಲಾಗುತ್ತಿದೆ. ಚಿಕ್ಕ ಮೆದುಳು ಹೊಂದಿದವರ ಯೋಚನಾ ಶಕ್ತಿ ಕಡಿಮೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ.

ಮೆದುಳಿನ ಬಗ್ಗೆ ಮಾಹಿತಿ!

ಮೆದುಳಿನಲ್ಲಿ 100 ಬಿಲಿಯನ್ ಗೂ ಹೆಚ್ಚು ನರಕೋಶಗಳಿವೆ. ಸಾಮಾನ್ಯ ಮೆದುಳು ದಿನವೊಂದಕ್ಕೆ 70,000ಕ್ಕೂ ಮಿಗಿಲಾದ ಆಲೋಚನೆಗಳಿಗೆ ಹುಟ್ಟನ್ನು ನೀಡುತ್ತದೆ. ಲಕ್ಶಾಂತರ ನೆನಪುಗಳ ಸಂಗ್ರಹಾಗಾರ. ಅನುಭವಗಳನ್ನು ಗ್ರಹಿಸುವುದು, ದೃಷ್ಟಿಕೋನಗಳನ್ನು ಕಾರ್ಯರೂಪಕ್ಕೆ ತರಲು ಇಂಬುಕೊಡುವುದು ಇದರ ಪ್ರಮುಖ ಕೆಲಸ.

ಭಾರತೀಯರ ಮೆದುಳಿನ ಗಾತ್ರ ಚಿಕ್ಕದು!

ಒಂದು ಸಂಶೋಧನೆ ಪ್ರಕಾರ ಭಾರತೀಯರ ಮೆದುಳು ಚಿಕ್ಕದಂತೆ. ಚೀನಿಯರು, ಕೋರಿಯನ್ನರಿಗೆ ಹೋಲಿಸಿದರೆ ಭಾರತೀಯರ ಮೆದುಳಿನ ಗಾತ್ರದಲ್ಲಿ ಬದಲಿದ್ದು ಇದು ಚಿಕ್ಕ ಗಾತ್ರದಲ್ಲಿ. ಇದರ ಎತ್ತರ ಹಾಗೂ ಅಗಲ ಚಿಕ್ಕದಾಗಿದೆ ಎಂದು ತಿಳಿದುಬಂದಿದೆ. ಆದರೆ ಇದನ್ನು ನಂಬುವ ಹಾಗಿಲ್ಲ. ಜಗತ್ತಿನಲ್ಲೇ ಭಾರತೀಯರು ಅತ್ಯಂತ ಸಾಧನೆ ಮಾಡುವವರ ಸಾಲಿನಲ್ಲಿದ್ದಾರೆ.ವಿಭಿನ್ನವಾಗಿ, ಸೃಜನಶೀಲವಾಗಿ ಯೋಚನೆ ಮಾಡುವ ಜನರಾಗಿದ್ದಾರೆ.

ಮೆದುಳಿನ 10ರಷ್ಟು ಭಾಗ ಉಪಯೋಗಿಸುತ್ತಾರೆ!

ವಿಶ್ವದ ಅಗಣಿತ ಸಂಶೋಧನೆ ಮತ್ತು ಆವಿಷ್ಕಾರಗಳ ಹಿಂದೆ ಲಕ್ಷಾಂತರ ಜನರ ಶ್ರಮವಿದೆ. ಆದರೆ ಸೋಜಿಗದ ವಿಷಯ ಏನಂದ್ರೆ ಎಲ್ಲಾ ಮನುಷ್ಯರು ಮೆದುಳಿನ 10ರಷ್ಟು ಭಾಗ ಮಾತ್ರ ಬಳಕೆ ಮಾಡುತ್ತಾರಂತೆ. ಹೌದು, ಮೆದುಳಿನ 10ರಷ್ಟು ಭಾಗ ಮಾತ್ರ ಬಳಕೆ ಮಾಡುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.


 

 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries