ಕೊಚ್ಚಿ: ತೃಕ್ಕಾಕರ ವಿಧಾನಸಭಾ ಉಪಚುನಾವಣೆಗೆ ಎಡಪಂಥೀಯ ಅಭ್ಯರ್ಥಿ ಜೋ ಜೋಸೆಫ್ ಅವರಿಗೆ ಪಕ್ಷ ಹಣ ನೀಡಿಲ್ಲ ಎಂದು ವರದಿಯಾಗಿದೆ. ಅಭ್ಯರ್ಥಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ. ಈ ಮಧ್ಯೆ ಯುಡಿಎಫ್ ಅಭ್ಯರ್ಥಿ ಉಮಾ ಥಾಮಸ್ ಮತ್ತು ಎನ್‍ಡಿಎ ಅಭ್ಯರ್ಥಿ ಎಎನ್ ರಾಧಾಕೃಷ್ಣನ್ ತಮ್ಮ ಪಕ್ಷದ ನಿಧಿಯನ್ನು ಬಳಸಿಕೊಂಡಿದ್ದಾರೆ.
ಉಮಾ ಥಾಮಸ್ ಪ್ರಚಾರಕ್ಕಾಗಿ 36,29,807 ಲಕ್ಷ ರೂ. ವೆಚ್ಚಮಾಡಿದ್ದಾರೆ. ಎಲ್ ಡಿಎಫ್ ಅಭ್ಯರ್ಥಿ ಡಾ.ಜೋ ಜೋಸೆಫ್ 34,84,839 ರೂ.ಖರ್ಚುಮಾಡಿದ್ದಾರೆ. ಎನ್ ಡಿಎ ಅಭ್ಯರ್ಥಿ ಎಎನ್ ರಾಧಾಕೃಷ್ಣನ್ ಅವರ ಪ್ರಚಾರಕ್ಕಾಗಿ 31,13,719 ರೂ. ಖರ್ಚು ಮಾಡಲಾಗಿದೆ.
ಉಮಾ ಥಾಮಸ್ ಗೆ ಪಕ್ಷ 27,40,000 ರೂ. ನೀಡಿತ್ತು. ಉಳಿದ 4,13,311 ಮೊತ್ತವನ್ನು ದೇಣಿಗೆ ಪಡೆಯಲಾಗಿತ್ತು. ಡಾ. ಜೋ ಜೋಸೆಫ್ ಅವರುÀ ಪಕ್ಷದಿಂದ ಯಾವ ಮೊತ್ತವನ್ನೂ ಪಡೆದಿಲ್ಲ. 1,90,000 ರೂ. ಹೊರಗಿಂತ ದೇಣಿಗೆ ಪಡೆಯಲಾಗಿದೆ. ಎಎನ್ ರಾಧಾಕೃಷ್ಣನ್ ಅವರಿಗೆ ಪಕ್ಷದಿಂದ 16,00,052 ರೂ.ನೀಡಲಾಗಿತ್ತು.
ಸ್ವತಂತ್ರ ಅಭ್ಯರ್ಥಿಗಳ ಪ್ರಚಾರ ವೆಚ್ಚ: ಮನ್ಮಥನ್ 1,83,765, ಬಾಸ್ಕೋ ಕಲಮಸೇರಿ 40,718, ಜೋಮನ್ ಜೋಸೆಫ್ 15,250, ಅನಿಲ್ ನಾಯರ್ 28,508, ಸಿಪಿ ದಿಲೀಪ್ ನಾಯರ್ 1,92,000.ರೂ. ವೆಚ್ಚಮಾಡಿದ್ದರು.