HEALTH TIPS

ಕೋವಿಡ್ ನಿಂದ ಸಾವನ್ನಪ್ಪಿದ 35 ಪತ್ರಕರ್ತರ ಕುಟುಂಬಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

           ನವದೆಹಲಿ :ಕೋವಿಡ್‌ ನಿಂದ ಸಾವನ್ನಪ್ಪಿರುವ 35 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರ ಅಧ್ಯಕ್ಷತೆಯ ಪತ್ರಕರ್ತರ ಕಲ್ಯಾಣ ಯೋಜನೆ ಸಮಿತಿ (ಜೆಡಬ್ಲುಎಸ್ಸಿ)ಯ ಪ್ರಸ್ತಾವವನ್ನು ಕೇಂದ್ರ ಸರಕಾರವು ಅನುಮೋದಿಸಿದೆ.

             ಮೃತ ಪತ್ರಕರ್ತರ ಕುಟುಂಬಗಳಿಗೆ ಐದು ಲ.ರೂ.ವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಇದರ ಜೊತೆಗೆ ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿರುವ ಇಬ್ಬರು ಪತ್ರಕರ್ತರಿಗೆ ಮತ್ತು ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ಇತರ ಐವರು ಪತ್ರಕರ್ತರ ವೈದ್ಯಕೀಯ ಚಿಕಿತ್ಸೆಗೆ ಜೆಎಸ್ಡಬ್ಲು ಮಾರ್ಗಸೂಚಿಯಂತೆ ಹಣಕಾಸು ನೆರವನ್ನು ಒದಗಿಸುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.
ಸಮಿತಿಯ ಸಭೆಯಲ್ಲಿ ಒಟ್ಟು 1.81 ಕೋ.ರೂ.ಗಳ ನೆರವಿಗೆ ಅನುಮೋದನೆ ನೀಡಲಾಗಿದೆ.

            ಯೋಜನೆಯಡಿ ಈವರೆಗೆ ಕೋವಿಡ್‌ ನಿಂದ ಸಾವನ್ನಪ್ಪಿರುವ 123 ಪತ್ರಕರ್ತರ ಕುಟುಂಬಗಳಿಗೆ ಹಣಕಾಸು ನೆರವನ್ನು ಒದಗಿಸಲಾಗಿದೆ. ಹಿಂದಿನ ವಿತ್ತವರ್ಷದಲ್ಲಿ 134 ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ವಿವಿಧ ವರ್ಗಗಳಡಿ 6.47 ಕೋ.ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries