ಕಾಸರಗೋಡು: ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 3556 ಮಂದಿ ಕ್ಯಾನ್ಸರ್ ಪಿಂಚಣಿ ಫಲಾನುಭವಿಗಳಿಗೆ 2,83,54,000 ರೂ. ಮತ್ತು 11,66,000 ರೂ ಗಳನ್ನು 256 ಮಂದಿ ಟಿಬಿ ಪಿಂಚಣಿ ಫಲಾನುಭವಿಗಳಿಗೆ ನೀಡಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಜೂನ್ ವರೆಗೆ, ವೆಳ್ಳರಿಕುಂಡ್ ತಾಲೂಕಿನಲ್ಲಿ ಮೇ ವರೆಗೆ ಮತ್ತು ಹೊಸದುರ್ಗ ತಾಲೂಕಿನಲ್ಲಿ ಏಪ್ರಿಲ್ ವರೆಗೆ ಫಲಾನುಭವಿಗಳಿಗೆ ಪಿಂಚಣಿ ವಿತರಿಸಲಾಗಿದೆ. ಪಿಂಚಣಿ ಬಾಕಿ ಪಾವತಿಗೆ ಹಣ ಮಂಜೂರಾಗಿದೆ. ಎರಡು ವಾರಗಳಲ್ಲಿ ಫಲಾನುಭವಿಗಳಿಗೆ ಬಾಕಿ ಹಣ ಪಾವತಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರುವರು.
ಜಿಲ್ಲೆಯಲ್ಲಿ 3556 ಮಂದಿ ಕ್ಯಾನ್ಸರ್ ಹಾಗೂ 256 ಮಂದಿ ಟಿಬಿ ಪಿಂಚಣಿದಾರರಿಗೆ ಆರ್ಥಿಕ ನೆರವು ವಿತರಿಸಲಾಗಿದೆ: ಜಿಲ್ಲಾಧಿಕಾರಿ
0
ಜುಲೈ 29, 2022
Tags