ಕಾಸರಗೋಡು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಐದು ವಾರ್ಡ್‍ಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರು ವಾರ್ಡ್‍ಗಳಲ್ಲಿ ಎಲ್‍ಡಿಎಫ್ ಮತ್ತು ಎರಡು ವಾರ್ಡ್‍ಗಳಲ್ಲಿ ಯುಡಿಎಫ್ ಜಯಗಳಿಸಿದೆ. ಬದಿಯಡ್ಕದ ಪಟ್ಟಾಜೆ ವಾರ್ಡನ್ನು ಬಿಜೆಪಿಯಿಂದ ಯುಡಿಎಫ್ ವಶಪಡಿಸಿಕೊಂಡಿದೆ. ಯುಡಿಎಫ್‍ನ ಶ್ಯಾಮ್ ಪ್ರಸಾದ್ ಮಾನ್ಯ 38 ಮತಗಳ ಬಹುಮತದಿಂದ ಜಯಗಳಿಸಿದ್ದಾರೆ. ಇಲ್ಲಿ ಬಿಜೆಪಿಯ 35 ವರ್ಷಗಳ ಏಕಸ್ವಾಮ್ಯವನ್ನು ಯುಡಿಎಫ್ ಉರುಳಿಸಿದೆ. ಕಾಞಂಗಾಡ್ ನಗರದ ತೋಯಮಾಲ್ ವಾರ್ಡ್‍ಗೆ ಎಲ್‍ಡಿಎಫ್ ಅಭ್ಯರ್ಥಿ ಎನ್.ಇಂದಿರಾ ಗೆಲುವು ಸಾಧಿಸಿದ್ದಾರೆ. ಕಲ್ಲಾರ ಪಂಚಾಯತ್ 2ನೇ ವಾರ್ಡ್ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸನ್ನಿ ಅಬ್ರಹಾಂ ಗೆಲುವು ಸಾಧಿಸಿದ್ದಾರೆ. ಪಳ್ಳಿಕ್ಕೆರೆ ಪಂಚಾಯತ್ 19ನೇ ವಾರ್ಡ್‍ಗೆ ಜಿಡಬ್ಲ್ಯುಎಲ್‍ಪಿಎಸ್ ಪಲ್ಲಿಪುಳದಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಸಮೀರ ಅಬ್ಬಾಸ್ ಗೆಲುವು ಸಾಧಿಸಿದ್ದಾರೆ. ಕುಂಬಳೆ ಪಂಚಾಯತ್ 14ನೇ ವಾರ್ಡ್ ಪೆರ್ವಾಡು ನಲ್ಲೂ ಎಲ್ ಡಿಎಫ್ ಅಭ್ಯರ್ಥಿ ಎಸ್ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಕಾಞಂಗಾಡು ಪುರಸಭೆ ತೋಯಮಾಲ್ ವಾರ್ಡ್
ಎನ್ ಇಂದಿರಾ:
ಇಲ್ಲಿ ಎಲ್‍ಡಿಎಫ್ ಅಭ್ಯರ್ಥಿ ಎನ್.ಇಂದಿರಾ 464 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಜಿಎಚ್‍ಎಸ್‍ಎಸ್ ವಳಾಲ್ ಪೂರ್ವ ದಕ್ಷಿಣ ಕಟ್ಟಡದಲ್ಲಿ ಶೇ.84.3ರಷ್ಟು ಮತದಾನವಾಗಿದೆ. ಎನ್ ಇಂದಿರಾ 701 ಮತಗಳು, ಯುಡಿಎಫ್ ಅಭ್ಯರ್ಥಿ ಪಿ ನಾರಾಯಣಿ (ಐಎನ್ ಸಿ) 237 ಮತಗಳು, ಬಿಜೆಪಿ ಅಭ್ಯರ್ಥಿ ಎಂಎ ರೇμÁ್ಮ 72 ಮತಗಳನ್ನು ಪಡೆದರು. ಕಾಞಂಗಾಡು ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಜಾನಕಿಕುಟ್ಟಿ ನಿಧನದ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆ ನಡೆದಿದೆ. ಒಟ್ಟು 1158 ಮತದಾರರಲ್ಲಿ 1010 ಮಂದಿ ಮತದಾನ ಮಾಡಿದ್ದರು.
ಪಳ್ಳಿಕ್ಕೆರೆ: 19ನೇ ವಾರ್ಡ್:
ಸಮೀರ:
ಪಳ್ಳಿಕ್ಕೆರೆ ಪಂಚಾಯತ್ ವಾರ್ಡ್ 19 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಮೀರ 831 ಮತಗಳನ್ನು ಪಡೆಯುವ ಮೂಲಕ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಶೈಲಜಾ 12 ಹಾಗೂ ಸ್ವತಂತ್ರ ಅಭ್ಯರ್ಥಿ ರಶೀದಾ 235 ಮತ ಪಡೆದರು. 57.14 ರಷ್ಟು ಮತದಾನವಾಗಿದೆ. 1886 ಮತದಾರರಿದ್ದು, 891 ಪುರುಷರು ಮತ್ತು 995 ಮಹಿಳೆಯರು ಇದ್ದಾರೆ. 1078 ಮತಗಳು ದಾಖಲಾಗಿವೆ. 461 ಪುರುಷರು ಮತ್ತು 617 ಮಹಿಳೆಯರು ಮತ ಚಲಾಯಿಸಿದ್ದಾರೆ. ಈ ವಾರ್ಡ್ ಮಹಿಳೆಯರಿಗೆ ಮೀಸಲು ವಾರ್ಡ್ ಆಗಿದೆ. ಮುಸ್ಲಿಂ ಲೀಗ್‍ನ ನಜೀರಾ ರಾಜೀನಾಮೆ ನೀಡಿದ ನಂತರ ಇಲ್ಲಿ ಉಪಚುನಾವಣೆ ನಡೆಸಲಾಯಿತು.
ಕಳ್ಳಾರ್ ಪಂಚಾಯತ್ ಎರಡನೇ ವಾರ್ಡ್:
ಸನ್ನಿ ಅಬ್ರಹಾಂ:
ಕಳ್ಳಾರ್ ಪಂಚಾಯತ್ 2ನೇ ವಾರ್ಡ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸನ್ನಿ ಅಬ್ರಹಾಂ 33 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಅಬ್ರಹಾಂ 441, ಸಾಜಿ ಪ್ಲಾಚೇರಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-ಐ) 408 ಮತ್ತು ಸುನೇಶ್ ನಾರಾಯಣನ್ (ಬಿಜೆಪಿ) 90 ಮತಗಳನ್ನು ಪಡೆದರು. 939 ಮತಗಳು ದಾಖಲಾಗಿವೆ. ಕಳೆದ ಪಂಚಾಯಿತಿ ಚುನಾವಣೆಯಲ್ಲಿ ಎಲ್‍ಡಿಎಫ್ ಗೆದ್ದಿದ್ದ ವಾರ್ಡ್ ಇದಾಗಿದೆ. ಆದರೆ ಪ್ರಚಾರದ ವೇಳೆ ಜೋಸ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಕಳ್ಳಾರ್ ನಲ್ಲಿ ಉಪಚುನಾವಣೆ ನಡೆಸಲಾಗಿತ್ತು. ವಾರ್ಡ್‍ನಲ್ಲಿ ಒಟ್ಟು 1178 ಮತದಾರರಿದ್ದಾರೆ. ಈ ಪೈಕಿ 939 ಮಂದಿ ಮತದಾನ ಮಾಡಿದ್ದಾರೆ. ಈ ಹಿಂದೆ 10 ವಾರ್ಡ್‍ಗಳಲ್ಲಿ ಯುಡಿಎಫ್, ಮೂರು ವಾರ್ಡ್‍ಗಳಲ್ಲಿ ಎಲ್‍ಡಿಎಫ್ ಮತ್ತು ಒಂದು ವಾರ್ಡ್‍ನಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಕುಂಬಳೆ ಪಂಚಾಯತ್ ಪೆರ್ವಾಡ್ ವಾರ್ಡ್
ಎಸ್.ಅನಿಲ್ ಕುಮಾರ್:
ಕುಂಬಳೆ ಪಂಚಾಯತ್ 14ನೇ ವಾರ್ಡ್ ಪೆರ್ವಾಡ್ ನಲ್ಲಿ ಎಲ್ ಡಿಎಫ್ ಅಭ್ಯರ್ಥಿ ಎಸ್ ಅನಿಲ್ ಕುಮಾರ್ (ಸಿಪಿಐಎಂ) 189 ಮತಗಳ ಬಹುಮತದಿಂದ ಜಯಗಳಿಸಿದ್ದಾರೆ. ಎಸ್ ಅನಿಲ್ ಕುಮಾರ್ ಒಟ್ಟು 675 ಮತಗಳನ್ನು ಪಡೆದರು. ಯುಡಿಎಫ್ ಅಭ್ಯರ್ಥಿ ಎಂ.ಜಿ.ನಾಸರ್ (ಐಯುಎಂಎಲ್) 486, ಅಭ್ಯರ್ಥಿ ಕೆ.ಎಂ.ಅಬ್ದುಲ್ ಶನಿಫ್ (ಎಸ್ ಡಿಪಿಐ) 141, ಮುರಳೀಧರ ಯಾದವ್ (ಬಿಜೆಪಿ) 61 ಹಾಗೂ ಸ್ವತಂತ್ರ ಅಭ್ಯರ್ಥಿ ಅನೀಶ್ ಕುಮಾರ್ 11 ಮತಗಳನ್ನು ಪಡೆದರು. ಒಟ್ಟು 1,374 ಮತಗಳು ಚಲಾವಣೆಯಾಗಿದ್ದವು. 761 ಮಹಿಳೆಯರು ಮತ್ತು 613 ಪುರುಷರು ಮತ ಚಲಾಯಿಸಿದ್ದಾರೆ. ಒಟ್ಟು ಮತಗಳು- 1825. ವಾರ್ಡ್ ಸದಸ್ಯರಾಗಿದ್ದ ಕೊಗ್ಗು ಅನರ್ಹಗೊಂಡ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.
ಬದಿಯಡ್ಕ ಪಂಚಾಯತ್ ಪಟ್ಟಾಜೆ ವಾರ್ಡ್:
ಕೆ ಶ್ಯಾಮಪ್ರಸಾದ್:
ಬದಿಯಡ್ಕ ಪಂಚಾಯತ್ 14ನೇ ವಾರ್ಡ್ ಪಟ್ಟಾಜೆಯಲ್ಲಿ ಯುಡಿಎಫ್ ಅಭ್ಯರ್ಥಿ ಕೆ ಶ್ಯಾಮಪ್ರಸಾದ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಐ) 39 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಕೆ. ಶ್ಯಾಮಪ್ರಸಾದ್ 427 ಮತಗಳನ್ನು ಪಡೆದರು. ಮಹೇಶ್ ವಳಕುಂಜ (ಬಿಜೆಪಿ) 389 ಮತ್ತು ಎಲ್ ಡಿಎಫ್ ಅಭ್ಯರ್ಥಿ ಎಂ ಮದನ (ಸಿಪಿಎಂ) 199 ಮತಗಳನ್ನು ಪಡೆದರು. ಒಟ್ಟು 1015 ಮತಗಳು ಚಲಾವಣೆಯಾಗಿದ್ದವು. 497 ಪುರುಷರು ಮತ್ತು 518 ಮಹಿಳೆಯರು ಮತ ಚಲಾಯಿಸಿದ್ದಾರೆ. ಪಟ್ಟಾಜೆ ಅಂಗನವಾಡಿ ಮತದಾನ ಕೇಂದ್ರದಲ್ಲಿ ಶೇ.79.607ರಷ್ಟು ಮತದಾನವಾಗಿದ್ದು, ಒಟ್ಟು 1275 ಮತಗಳು ದಾಖಲಾಗಿವೆ.ಈ ಹಿಂದೆ 35 ವರ್ಷಗಳಿಗೂ ಹೆಚ್ಚು ಕಾಲ ಈ ವಾರ್ಡ್ ಬಿಜೆಪಿ ವಶದಲ್ಲಿತ್ತು.
ಬದಿಯಡ್ಕದ ಪಟ್ಟಾಜೆ ವಾರ್ಡ್ ನಿಂದ ಚುನಾಯಿತರಾದ ಶ್ರೀ ಶ್ಯಾಮ್ ಪ್ರಸಾದ್ ಮಾನ್ಯ ಅವರಿಗೆ ನನ್ನ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ- ದಿವಾಣ ಗೋಪಾಲಕೃಷ್ಣ ಭಟ್ , ಉಡುಪಿ.✌💪🙏