ಬೆಂಗಳೂರು: ಯೋಧರೊಬ್ಬರು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ನಲ್ಲೇ ಬರೀ 36 ಗಂಟೆಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದಾರೆ. ಬೆಂಗಳೂರಿನ 515 ಆರ್ಮಿ ಬೇಸ್ನ ಕ್ರಾಫ್ಟ್ಸ್ಮ್ಯಾನ್ ರಾಹುಲ್ ಕುಮಾರ್ ಈ ಸಾಧನೆ ಮಾಡಿದ್ದಾರೆ.

ಇವರು ಜುಲೈ 8-9ರ ಒಟ್ಟು 36 ಗಂಟೆಗಳಲ್ಲಿ 650 ಕಿ.ಮೀ. ದೂರವನ್ನು ಕ್ರಮಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಪುರುಷರ ವಿಭಾಗದಲ್ಲಿ ಅತಿವೇಗದ ಏಕಾಂಗಿ ಸೈಕಲ್ ಸವಾರಿ ಎಂಬ ದಾಖಲೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಬರೆದಿದ್ದಾರೆ. ಹೊಸೂರು, ಸೇಲಂ, ಮಧುರೈ ಮೂಲಕ ಈ ಪ್ರಯಾಣ ಸಾಗಿದ್ದು, ಇದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಆನ್ಲೈನ್ನಲ್ಲೇ ನಿಗಾ ವಹಿಸಿತ್ತು. ಪ್ರಯಾಣದುದ್ದಕ್ಕೂ ಮಳೆಯಾಗುತ್ತಿದ್ದರೂ ಇವರು ಗುರಿಯನ್ನು ಯಶಸ್ವಿಯಾಗಿ ತಲುಪಿದ್ದಾರೆ.
'ಫಿಟ್ನೆಸ್ ಎ ವೇ ಆಫ್ ಲೈಫ್' ಎಂಬುದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ರಿಗೇಡಿಯರ್ ಎಂಆರ್ಕೆ ರಾಜೇಶ್ ಪಣಿಕರ್, ಬ್ರಿಗೇಡಿಯರ್ ಅಲೋಕ್ ಜೈನ್ ಅವರು ಜು. 8ರ ಬೆಳಗ್ಗೆ 6ಕ್ಕೆ ಬೆಂಗಳೂರಿನ 515 ಆರ್ಮಿ ಬೇಸ್ ವರ್ಕ್ಶಾಪ್ನಲ್ಲಿ ಈ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು. ರಾಹುಲ್ ಜು.9ರಂದು ತಮಿಳುನಾಡಿನ ಕನ್ಯಾಕುಮಾರಿಯನ್ನು ತಲುಪಿದ್ದರು.