ಹೆಚ್ಚಿನ ಮಹಿಳೆಯರು ಸೀರೆ ಉಡಲು ಇಷ್ಟಪಡುತ್ತಾರೆ. ವಿವಿಧ ಬಟ್ಟೆಗಳು ಮತ್ತು ವರ್ಣರಂಜಿತ ಬಣ್ಣಗಳಲ್ಲಿ ಲಭ್ಯವಿರುವ ಸೀರೆಗಳನ್ನು ಹೊಂದಲು ಮಹಿಳೆಯರು ಆಸಕ್ತಿ ತೋರಿಸುತ್ತಾರೆ. ನಟಿ ನಳಿನಿ ಅವರ ಸ್ಪಷ್ಟ ಹೇಳಿಕೆಗಳು ಈಗ ಸೀರೆ ಪ್ರಿಯರಲ್ಲಿ ಚರ್ಚೆಯ ವಿಷಯವಾಗಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಳಿನಿ ತಮ್ಮ ಸೀರೆ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಪ್ರತಿದಿನ ಉಡಲು ಹೊಸ ಸೀರೆ ಬೇಕು ಎಂದು ನಳಿನಿ ಹೇಳಿದ್ದಾರೆ. ಹಾಗಾಗಿ ವರ್ಷದ 365 ದಿನವೂ ಹೊಸ ಸೀರೆಗಳನ್ನು ಧರಿಸುತ್ತೇನೆ ಎಂದು ಹುಬ್ಬೇರಿಸುವಂತೆ ಮಾಡಿದರು. ಇದು ನನ್ನ ಮಟ್ಟಿಗೆ ನಿಜ. ಸೀರೆಗಳ ವ್ಯಾಮೋಹದಿಂದ ತಾನೆಲ್ಲಿಗು ಹೋದರೂ ಸೀರೆಗಳನ್ನು ಖರೀಸುತ್ತೇನೆ. ಹಾಗಾಗಿ ಈ ಎಲ್ಲ ಸೀರೆಗಳನ್ನು ಸಂಗ್ರಹಿಸಲು ಮನೆಯೊಂದನ್ನು ಸಿದ್ಧಪಡಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತಾನು ಸಂಪಾದಿಸಿದ ಸೀರೆಗಳ ದೊಡ್ಡ ಸಂಗ್ರಹವಿದೆ ಎಂದು ನಳಿನಿ ಹೇಳಿದ್ದಾರೆ.
ನಳಿನಿ ದಕ್ಷಿಣ ಭಾರತದ ಭಾಷೆಯ ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ. 1980ರಲ್ಲಿ ‘ಇತ್ತಿಲೆ ವನ್ನವರ್’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಮೊದಲ ಹೆಸರು ರಾಣಿ. ‘ಇಡವೇಲ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಂತರ ನಳಿನಿ ಎಂಬ ಹೆಸರನ್ನು ಅಳವಡಿಸಿಕೊಳ್ಳಲಾಯಿತು. ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ಸಕ್ರಿಯರಾಗಿದ್ದ ನಳಿನಿ ಸುಮಾರು 20 ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.
ಮಲೆಯಾಳಿಗರು ನಳಿನಿಯ ನಿಷ್ಕಪಟ ಮಾತು ಕೇಳಿ ಅಚ್ಚರಿಗೊಂಡಿದ್ದಾರೆ. ನಳಿನಿ ಸೀರೆಯ ಮೇಲಿನ ವ್ಯಾಮೋಹವನ್ನು ಬಹಿರಂಗಪಡಿಸುವುದರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸೀರೆ ಪ್ರೇಮವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಯಲಲಿತಾ ಅವರ ಸಂಗ್ರಹದಲ್ಲಿ 10,000 ಕ್ಕೂ ಹೆಚ್ಚು ಸೀರೆಗಳಿವೆ ಎಂದು ನಂಬಲಾಗಿದೆ.