ಶಾಂಘೈ: ಒಂದು ಕಟ್ಟಡವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎತ್ತಿಕೊಂಡು ಹೋಗುವ ತಂತ್ರಜ್ಞಾನ ಬಂದು ಕೆಲ ವರ್ಷಗಳೇ ಗತಿಸಿವೆ. ತುಂಬಾ ಕುತೂಹಲ ಎನ್ನುವ ರೀತಿಯಲ್ಲಿ ಕಟ್ಟಡಗಳನ್ನು ಸ್ಥಳಾಂತರ ಮಾಡಲಾಗುತ್ತದೆ.
ಆದರೆ ಈ ತಂತ್ರಜ್ಞಾನ ಬಳಸಿ ಸುಮಾರು 3,800 ಟನ್ ತೂಗುವ ಕಟ್ಟಡವನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ.
ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಟ್ಟಡವನ್ನು ತಳ್ಳಲು ಸ್ಲೈಡಿಂಗ್ ಹಳಿಯನ್ನು ಬಳಸಲಾಗಿದೆ. ಕಟ್ಟಡ ನಗರದಲ್ಲೇ ಅತ್ಯಂತ ದೊಡ್ಡ ಹಾಗೂ ಭಾರವಾದ ಕಲ್ಲಿನ ರಚನೆಯಾಗಿದೆ. ವಾಕಿಂಗ್ ಮಷಿನ್ ತಂತ್ರಜ್ಞಾನದಿಂದ ಕಟ್ಟಡವನ್ನು ಮೇಲೆತ್ತಿ, ಸ್ಥಳಾಂತರಿಸಲಾಗಿದೆ. ಸ್ಟ್ರಕ್ಚರಲ್ ಮೂವಿಂಗ್ ಎನ್ನುವುದು ಸಂಪುರ್ಣ ಕಟ್ಟಡವನ್ನು ಅಡಿಪಾಯದಿಂದಲೇ ಮೇಲಕ್ಕೆತ್ತಿ, ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ. ಇದು ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಲು ಉಪಯೋಗವಾಗುವ ಸಾಮಾನ್ಯ ಮಾರ್ಗ. ಪ್ರವಾಹದ ಅಪಾಯದಲ್ಲೂ ಕಟ್ಟಡಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದು ಕಟ್ಟಡ ಸ್ಥಳಾಂತರ ಮಾಡಿರುವ ಪ್ರಕ್ರಿಯೆಯಲ್ಲಿ ತೊಡಗಿರುವ ಇಂಜಿನಿಯರ್ಗಳು ಹೇಳಿದ್ದಾರೆ.
ಕಟ್ಟಡವನ್ನು ಸ್ಥಳಾಂತರಿಸುವ ಸಂದರ್ಭ ಅದನ್ನು ಎಲ್ಲಿಯೂ ಭಾಗ ಮಾಡಲಾಗಿಲ್ಲ. ಸಂಪೂರ್ಣ ಒಂದೇ ತುಂಡನ್ನು ಸ್ಥಳಾಂತರಿಸಲಾಗಿದೆ ಎನ್ನುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇದು ವೈರಲ್ ಆಗುತ್ತಿದ್ದಂತೆಯೇ, ಹಲವರು ಈಹಿಂದೆ ಬೃಹತ್ ಕಟ್ಟಡಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಿರುವ ವಿಡಿಯೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: