ಮುಂಬೈ: ಇತ್ತೀಚೆಗೆ ಅಂತರ್ಜಾಲ ತಾಣದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಜನರಿಗೆ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರೂ, ಪದೇ ಪದೇ ವಂಚನೆಗೊಳಗಾಗುತ್ತಲೇ ಇದ್ದಾರೆ. ಇದೀಗ ಮ್ಯಾಟ್ರಿಮೊನಿಯಲ್ ಮೂಲಕ ಮಹಿಳೆಯೊಬ್ಬಳು ವಂಚನೆಗೊಳಗಾಗಿದ್ದಾಳೆ.

ತಾನೊಬ್ಬ ವೈದ್ಯ ಅದರಲ್ಲೂ ದುಬೈಯಲ್ಲಿ ಕೆಲಸ ಮಾಡುತ್ತಿದ್ದು, ನಾವಿಬ್ಬರೂ ಮದುವೆಯಾಗೋಣ ಎಂದು ಹೇಳಿ ನಂಬಿಸಿದ್ದ ಇದೇ ನಂಬಿಕೆಯಿಂದಲೇ ಆತನಿಗೆ ಲಕ್ಷ ಲಕ್ಷ ಹಣ ಕೊಟ್ಟ ಮಹಿಳೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇಲ್ಲಿನ ಅಂಧೇರಿ ನಿವಾಸಿಯಾಗಿರುವ 38 ವರ್ಷದ ಮಹಿಳೆಗೆ ಮ್ಯಾಟ್ರಿಮೋನಿಯಲ್ನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಈ ವೇಳೆ ತಾನು ವೈದ್ಯ, ದುಬೈಯಲ್ಲಿದ್ದೇನೆ ಎಂದು ನಂಬಿಸಿದ್ದ ಈತ, ತನ್ನ ವಿಳಾಸವನ್ನೂ ಕೂಡ ನೀಡಿಲ್ಲ. ಆದರೆ ಇದನ್ನೇ ನಿಜ ಎಂದು ನಂಬಿದ್ದ ಮಹಿಳೆ ತನ್ನ ಬಳಿ ಇದ್ದ ಹಣವನ್ನು ನೀಡಿ ಮೋಸ ಹೋಗಿದ್ದಾಳೆ.
ಸದ್ಯಕ್ಕೆ ತನ್ನ ಬಳಿ ಹಣವಿಲ್ಲ, ವೇತನ ಬಂದ ಕೂಡಲೇ ಕೊಡುತ್ತೇನೆ ಎಂದು ಹೇಳಿದ್ದನು. ಕೆಲ ದಿನಗಳಾದರೂ ಹಣ ವಾಪಸ್ ನೀಡದಿದ್ದಾಗ ಈ ಮಹಿಳೆ ಹಣ ಕೇಳಿದ್ದಾಳೆ. ಆಗಲೇ ಆತನ ನಿಜಬಣ್ಣ ಬಯಲಾಗಿದೆ. ಆದರೆ ಆತನ ಬಗ್ಗೆ ಸ್ಪಷ್ಟ ಮಾಹಿತಿಯೂ ಗೊತ್ತಿರದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.