ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳು ಜಮ್ಮು-ಕಾಶ್ಮೀರದ 700 ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಂಡಿವೆ. ಬಹುತೇಕ ವಿದೇಶಿಯರನ್ನು ಒಳಗೊಂಡ 141 ಭಯೋತ್ಪಾದಕರು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2022 ಜುಲೈ 5ರ ವರೆಗೆ ಜಮ್ಮು ಕಾಶ್ಮೀರದಲ್ಲಿ ಒಟ್ಟು 82 ವಿದೇಶಿ ಉಗ್ರರು ಮತ್ತು 59 ಸ್ಥಳೀರ ಉಗ್ರರು ಸಕ್ರಿಯರಾಗಿದ್ದಾರೆ. ಇವರಲ್ಲಿ ಬಹುತೇಕರು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದವರು. ಉಳಿದಂತೆ ಜೈಷ್-ಎ-ಮಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಸಹ ಸಕ್ರಿಯರಾಗಿದ್ದಾರೆ.
ವಿವಿಧ ಭಯೋತ್ಪಾದಕ ಸಂಘಟನೆಗಳು, 2018ರಲ್ಲಿ 187 ಮಂದಿ, 2019ರಲ್ಲಿ 121, 2020ರಲ್ಲಿ 181 ಮತ್ತು 2021ರಲ್ಲಿ 142 ಮತ್ತು ಈ ವರ್ಷ ಜೂನ್ ಅಂತ್ಯದ ಒಳಗಾಗಿ 69 ಮಂದಿ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಂಡಿವೆ.
ಈ ನಡುವೆ ಈ ವರ್ಷ ಇಲ್ಲಿಯವರೆಗೆ ಭದ್ರತಾ ಪಡೆ 55 ಎನ್‌ಕೌಂಟರ್‌ಗಳಲ್ಲಿ 125 ಉಗ್ರರನ್ನು ಹತ್ಯೆ ಮಾಡಿದೆ. ಈ ಪೈಕಿ 91 ಮಂದಿ ಸ್ಥಳೀಯರು ಮತ್ತು 34 ಮಂದಿ ವಿದೇಶಿಯರು. ಇನ್ನು 123 ಉಗ್ರರನ್ನು ಬಂಧಿಸಿ, ಅಗಾದ ಪ್ರಮಾಣದ ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ.
ಇದಲ್ಲದೆ 2021ರಲ್ಲಿ 172, 2020ರಲ್ಲಿ 251, 2019ರಲ್ಲಿ 148 ಮತ್ತು 2018ರಲ್ಲಿ 185 ಮಂದಿ ಉಗ್ರರನ್ನು ಭದ್ರತಾ ಪಡೆ ಬಂಧಿಸಿದೆ ಎಂದು ತಿಳಿಸಿದೆ.