ವಿಜಯವಾಡ: ಆಂಧ್ರ ಪ್ರದೇಶದ ದ್ವಾರಕ ತಿರುಮಲದ ಗುಂಡುಗೊಲುಗುಂಟ ಗ್ರಾಮದಲ್ಲಿ 30 ಅಡಿ ಆಳದ ತೆರೆದ ಕೊಳಬೆ ಬಾವಿಗೆ ಬಿದಿದ್ದ 9 ವರ್ಷದ ಬಾಲಕನೊಬ್ಬನನ್ನು ಧೈರ್ಯಶಾಲಿ ಯುವಕನೊಬ್ಬ ಐದು ಗಂಟೆಗಳ ಸಾಹಸ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬಾಲಕ ಎಸ್. ಜಸ್ವಂತ್ ತನ್ನ ಮನೆ ಬಳಿ ಆಡುತ್ತಿದ್ದಾಗ ಬುಧವಾರ ರಾತ್ರಿ 7 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ. ಆತನ ಪೋಷಕರು ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಹಾಯಕಕ್ಕಾಗಿ ಕೂಗುತ್ತಿದ್ದ ಬಾಲಕನ ಧ್ವನಿಯನ್ನು ಕೇಳಿದ ನೆರೆಹೊರೆಯವರು, ಆತನ ಪೋಷಕರಿಗೆ ತಿಳಿಸಿದ್ದಾರೆ.
ಹುಡುಕಾಟ ಮುಂದುವರೆಸಿದಾಗ ಆ ಬಾಲಕ 400 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ಆಗ ಅವರು ಹಗ್ಗವನ್ನು ಬಾವಿಗೆ ಇಳಿಸಿದ್ದು, ಬಾಲಕ 30 ಅಡಿ ಕೆಳಗೆ ಸಿಲುಕಿಕೊಂಡಿರುವುದನ್ನು ಕಂಡುಕೊಂಡಿದ್ದಾರೆ. ತದನಂತರ ಸ್ಥಳೀಯ ಯವಕ ಸುರೇಶ್ ಬಾಲಕನನ್ನು ರಕ್ಷಿಸಲು ಮುಂದಾಗಿದ್ದಾರೆ.
ಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು 0.25 ಮೀಟರ್‌ಗಿಂತಲೂ ಕಡಿಮೆ ವ್ಯಾಸದ ಕಿರಿದಾದ ರಂಧ್ರದೊಂದಿಗೆ ಕೊಳವೆ ಬಾವಿಯೊಳಗೆ ಇಳಿದ ಸುರೇಶ್, ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಬಾಲಕನ ಸೊಂಟಕ್ಕೂ ಹಗ್ಗ ಕಟ್ಟಿದ್ದಾರೆ. ಇತರರು ಸುರಕ್ಷಿತವಾಗಿ ಬಾಲಕನನ್ನು ಬಾವಿಯಿಂದ ಕೆಳಗೆ ಎತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಐದು ಗಂಟೆಗಳ ಕಾಲ ರಕ್ಷಣೆ ಕಾರ್ಯಾಚರಣೆ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ಬರುವಷ್ಟರಲ್ಲಿ ಜಸ್ವಂತ್ ನನ್ನು ಯಾವುದೇ ಗಾಯವಿಲ್ಲದೆ ಸ್ಥಳೀಯರು ಮೇಲಕ್ಕೆ ಎತ್ತಿದ್ದಾರೆ.