ಕಾಶ್ಮೀರ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರೆ ಈ ವರ್ಷ ಆರಂಭವಾದಾಗಿನಿಂದ ಸುಮಾರು 5 ಭಕ್ತರು ಸಾವನ್ನಪ್ಪಿದ್ದು, ಸುಮಾರು 40, 000 ಭಕ್ತರು ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಗುಹ ದೇವಾಲಯಕ್ಕೆ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವಿರೇಂದ್ರರ್ ಗುಪ್ತಾ ಎಂಬ ಭಕ್ತರೊಬ್ಬರು ಚಂದನ್ ವಾರಿ- ಶೇಷನಾಗ ಮಾರ್ಗದಿಂದ ನಾಪತ್ತೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಐವರು ಮೃತರ ಪೈಕಿ ಮೂವರು ಹೃದಯಾಘಾತದಿಂದ ಸಾವನ್ನಪ್ಪದ್ದಾರೆ. ದೆಹಲಿಯ ಜೈ ಪ್ರಕಾಶ್ ಎಂಬುವರು ಚಂದನ್ ವಾರಿಯಲ್ಲಿ, ಬರೈಲಿಯ ದೇವೇಂದರ್ ತಯಲ್ ಕೆಳ ಗುಹೆಯಲ್ಲಿ ಮತ್ತು ಬಿಹಾರದ ಲಿಪೊ ಶರ್ಮಾ ಕ್ವಾಜಿಗುಂದ ಶಿಬಿರದಲ್ಲಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಿಂದ ಬಂದಿದ್ದ ಜಗನಾಥ್ ಕೆಲ ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ರಾಜಸ್ಥಾನದ ಅಶು ಸಿಂಗ್ ಎಂಬುವರು ಕುದುರೆಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆಯವರೆಗೂ 40. 233 ಭಕ್ತರು ಗುಹೆ ದೇವಾಲಯಕ್ಕೆ ಭೇಟಿ ನೀಡಿದ್ದು, ಶಿವಲಿಂಗ ದರ್ಶನ ಪಡೆದಿದ್ದಾರೆ. ಜೂನ್ 30 ರಿಂದ ಆರಂಭವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 11 ರಂದು ಅಂತ್ಯಗೊಳ್ಳಲಿದೆ.