HEALTH TIPS

ಮೀಯಪದವಲ್ಲಿ ಮಲಯಾಳಂ ಉತ್ಸವ!!: ಸಚಿವ ಅಹ್ಮದ್ ದೇವರ್ ಕೋವಿಲ್ ಉದ್ಘಾಟನೆ: 40 ವರ್ಷಗಳ ಪ್ರಯತ್ನ ಸಾಕಾರಗೊಂಡಿರುವುದು ಸಂತಸತಂದಿದೆ ಎಂದ ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ

                ಕುಂಬಳೆ: ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿಯ ಕಳೆದ 40  ವರ್ಷಗಳ ಪ್ರಯತ್ನ ಸಾಕಾರಗೊಂಡಿರುವುದು ಸಂತಸ ತಂದಿದೆ. ಮಲಯಾಳಂ ಕಲಿಯಲು ಸೌಲಭ್ಯಗಳಿಲ್ಲದ ಮಂಜೇಶ್ವರದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾತೃಭಾಷೆ ಕಲಿಯುವ ಹಕ್ಕಿಗಾಗಿ ಸಮಿತಿಯ ಹೋರಾಟ ನಡೆಸಿತ್ತು.  1ನೇ ಪಿಣರಾಯಿ ಸರ್ಕಾರದ ಅವಧಿಯಲ್ಲಿ ಅಧ್ಯಯನ ಸೌಲಭ್ಯ ಕಲ್ಪಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈ ಜೂನ್ ವೇಳೆಗೆ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದಾಗ ಕಾರ್ಯ ಸಾಕಾರಗೊಂಡಿದೆ ಎಂದು ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

               ಐದು ಶಾಲೆಗಳಿಗೆ ಒಬ್ಬ ಶಿಕ್ಷಕರಂತೆ ನೇಮಕವಾಗಿದೆ. ಕೆಲ ಶಿಕ್ಷಕರಿಗೆ ಶುಲ್ಕ ವಿಧಿಸದಿದ್ದರೂ ಸಂಬಂಧಪಟ್ಟವರಿಂದ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

     ಈ ಹಿನ್ನೆಲೆಯಲ್ಲಿ ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಮಲಯಾಳಂ ಉತ್ಸವ ನ.15 ಮತ್ತು 16ರಂದು ಮೀಯಪದವಿನಲ್ಲಿ ನಡೆಯಲಿದೆ. ಬಂದರು ಮತ್ತು ವಸ್ತುಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು, 15 ರಂದು ಪ್ರಚಾರಜಾಥಾ, 16 ರಂದು ಬೆಳಿಗ್ಗೆ 9.30 ಕ್ಕೆ ಸಾರ್ವಜನಿಕ ಸಭೆ, 11.30 ಕ್ಕೆ ಸಪ್ತಭಾಷಾ ಸೌಹಾರ್ದ ಕೂಟ, ಎರಡು ಗಂಟೆಗೆ ಯುವ ಕೂಟ ಹಾಗೂ ಮೂರು ಗಂಟೆಗೆ ಉನ್ನತ ಅಂಕಗಳಿಂದ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

                 ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಂ.ಕೆ.ಅಲಿ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಎಸ್.ವಿನಾಯಕನ್ ಮಾಸ್ತರ್, ಕೋಶಾಧಿಕಾರಿ ಅಬ್ಬಾಸ್ ವಾನಂದೆ, ಬಿ.ಅಬ್ದುಲ್ ಮಜೀದ್, ಅಬ್ದುಲ್ಲ ಹಾಜಿ ತಾಕು, ಬಾವುಂಜಿ ಮೀಯಪದವು, ಹನೀಫ್ ಬಾಳ್ಯೂರು  ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries