HEALTH TIPS

ವೈರಲ್: ಮುನಿಸಕೊಂಡ ತಮ್ಮನಿಗಾಗಿ 432ಮೀ ಉದ್ದ, 5ಕೆಜಿ ತೂಕದ ಪತ್ರ ಬರೆದ ಅಕ್ಕ, ಕೇರಳದ ನಡೆದ ಸುಂದರ ಘಟನೆ

 ಸಹೋದರ-ಸಹೋದರಿಯೆಂಬುವುದು ಒಂದು ಸುಂದರವಾದ ಬಂಧ, ಅಲ್ಲಿ ಜಗಳವಿರುತ್ತೆ, ಮುನಿಸು ಇರುತ್ತೆ, ಕಿತ್ತಾಟವಿರುತ್ತೆ ಆದರೆ ಒಬ್ಬರನ್ನೊಬ್ಬರು ಅಷ್ಟೇ ಕಾಳಜಿ ಕೂಡ ಮಾಡುತ್ತಾರೆ. ನಮ್ಮಲ್ಲಿ ಸಹೋದರಿ-ಸಹೋದರಿ ಬಂಧವನ್ನು ಕೊಂಡಾಡುವ ರಾಖಿ ಹಬ್ಬ ಕೂಡ, ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ International Brothers Day ಎಂದು ಕೂಡ ಆಚರಿಸಲಾಗುವುದು... ಈ ಕತೆ ಪ್ರಾರಂಭವಾಗುವುದೇ ಈ ದಿನದಿಂದ ಅದು ನಡೆದಿರುವುದು ಕೇರಳದಲ್ಲಿ. ಇದೀಗ ಸಹೋದರನಿಗೆ ಸಹೋದರಿ ಬರೆದ ಪತ್ರ ತುಂಬಾ ವೈರಲ್‌ ಆಗಿದೆ, ಏನಿದು ಕತೆ ಎಂದು ನೋಡೋಣ

ವಿಶ್ ಮಾಡದ ಅಕ್ಕನ ಮೇಲೆ ತಮ್ಮನ ಮುನಿಸು

ಕೇರಳದ ಆ ಸಹೋದರಿ ಮೇಲೆ ಸಹೋದರನಿಗೆ ಮುನಿಸು ಅಂತೆ, ಕಾರಣ ಆಕೆ ಬ್ರದರ್ಸ್‌ ಡೆ ದಿನ ವಿಶ್‌ ಮಾಡುವುದನ್ನು ಮರೆತಿದ್ದಳು, ಆ ಕಾರಣಕ್ಕೆ ಅವನಿಗೆ ತುಂಬಾನೇ ಬೇಸರವಾಗುತ್ತೆ. ಪಾಪ ಆತನ ಈ ದಿನ ನನ್ನ ಸಹೋದರಿ ವಿಶ್‌ ಮಾಡಿಯೇ ಮಾಡುತ್ತಾಳೆ ಎಂದು ತುಂಬಾ ನಿರೀಕ್ಷೆ ಮಾಡಿದ್ದ ಕಾಣುತ್ತೆ, ಇವಳಿಗೆ ಮರೆತು ಹೋಗಿದೆ, ಅಷ್ಟೇ ಅವನಿಗೆ ಅಕ್ಕನ ಮೇಲೆ ತುಂಬಾ ಕೋಪ ಬಂದು ಮಾತನಾಡುವುದನ್ನೇ ನಿಲ್ಲಿಸಿ ಬಿಡುತ್ತಾನೆ, ಅಷ್ಟು ಸಾಲದು ಎಂಬಂತೆ ಆಕೆಯನ್ನು ವಾಟ್ಸಾಪ್‌ನಲ್ಲೂ ಬ್ಲಾಕ್ ಮಾಡಿ ಬಿಡುತ್ತಾನೆ.

ತಮ್ಮ ಮಾತನಾಡುತ್ತಿಲ್ಲ, ವಾಟ್ಸಾಪ್‌ನಲ್ಲಿ ಅವನಿಗೆ ತನ್ನ ಭಾವನೆಗಳನ್ನು ಬರೆದು ಕಳಿಸೋಣ ಎಂದರೆ ಅಲ್ಲಿಯೋ ಬ್ಲಾಕ್‌.

ಓಲ್ಡ್‌ ಈಸ್ ಗೋಲ್ಡ್‌ ಎಂಬಂತೆ ಕಾಗದದ ಮೊರೆ ಹೋದ ಸಹೋದರಿ ಈಗೆಲ್ಲಾ ಲೆಟರ್‌ ಬರೆಯುವುದೇ ಮರೆತು ಹೋಗಿದೆ, ಮೊದಲೆಲ್ಲಾ ಮನಸ್ಸಿನ ಭಾವನೆಗಳನ್ನು ಅಷ್ಟೂ ಬರೆದು ಪುಟಗಟ್ಟಲೆ ಸಂದೇಶ ಕಳುಹಿಸುತ್ತಿದ್ದರೆ, ಆದರೆ ಈ ವಾಟ್ಸಾಪ್‌, ಫೇಸ್‌ಬುಕ್‌ ಕಾಲದಲ್ಲಿ ಬರೆಯುವುದಕ್ಕಿಂತ ಒಮೋಜಿ ಹಾಕಿ ತಮ್ಮ ಮನಸ್ಸಿನ ಭಾವನೆ ಹೇಳುವವರೇ ಹೆಚ್ಚು. ಈ ಅಕ್ಕ ತನ್ನ ತಮ್ಮನಿಗೆ ಮನಸ್ಸಿನ ಭಾವನೆ ಹೇಳಲು ಕಾಗದ ಬರೆಯಲಿಕ್ಕೆ ಶುರು ಮಾಡುತ್ತಾಳೆ.


ಆಕೆ ಕಾಗದ ಬರೆದಿದ್ದು ದೊಡ್ಡ ವಿಷಯವಲ್ಲ, 5 ಕೆಜಿ ತೂಗುವಷ್ಟು ಬರೆದಿರುವುದೇ ವಿಶೇಷ ಅವಳು ಕಾಗದ ಬರೆಯಲು ಪ್ರಾರಂಭಿಸಿದ ಮೇಲೆ ಪ್ರತಿಯೊಂದು ವಿಷಯವನ್ನೂ ಬರೆಯುತ್ತಾ ಹೋಗುತ್ತಾಳೆ. ಅವನು ಹುಟ್ಟಿದ ಕ್ಷಣದಿಂದ ಹಿಡಿದು ಇಂಜಿನಿಯರ್‌ ಓದುತ್ತಿರುವ ಈ ದಿನಗಳವರೆಗೆ ಪ್ರತಿಯೊಂದು ಘಟನೆಯನ್ನು ನೆನೆದು ಬರೆಯುತ್ತಾಳೆ. ಅವಳಿಗೆ ಕಾಗದ ಬರೆದು ಮುಗಿಸಲು 14 ರೋಲ್ ಪೇಪರ್ ಬೇಕಾಯ್ತು, ಬರೆದು ಮುಗಿಸಲು ಬರೋಬರಿ 12 ಗಂಟೆ ಸಮಯ ತೆಗೆದುಕೊಂಡಿದ್ದಾಳೆ. ಈಗ ಆ ಕಾಗದದ ಉದ್ದ 434 ಉದ್ದ, 5 ಕೆಜಿ ತೂಕವಿದೆ.

ಇದೀಗ ಅಕ್ಕ-ತಮ್ಮನಿಗೆ ಬರೆದ ಈ ಲೆಟರ್‌ ವೈರಲ್‌  ಅಕ್ಕ ಕೃಷ್ಣ ಪ್ರಿಯೆ ಈ ಲೆಟರ್ ಬರೆದಿದ್ದು ಅದನ್ನು ಓದಿದ ತಮ್ಮ ಕೃಷ್ಣ ಪ್ರಸಾದ್ ಮುಖದಲ್ಲಿ ನಗು ಮೂಡಿದೆ. ಕೃಷ್ಣಪ್ರಿಯೆ ಹುಟ್ಟಿ 7 ವರ್ಷದ ಬಳಿಕ ಕೃಷ್ಣ ಪ್ರಸಾದ್‌ ಹುಟ್ಟಿದ, ಅವನ ಆರೈಕೆಯನ್ನು ತಾಯಿಯಂತೆಯೇ ಮಾಡಿದ್ದಾಳೆ. ಅವನಿಗೆ ಅವಳು ಎರಡನೇ ತಾಯಿ ಹಾಗೂ ಶಿಕ್ಷಕಿಯಿದ್ದಂತೆ. ಇಬ್ಬರು ತುಂಬಾನೇ ಪ್ರೀತಿಯಿಂದ ಇರುತ್ತಾರೆ, ಯಾವುದಾದರೂ ಫ್ಯಾಮಿಲಿ ಫಂಕ್ಷನ್‌ಗೆ ಒಂದೇ ಬಣ್ಣದ ಬಟ್ಟೆ ಕೂಡ ಧರಿಸುತ್ತಿದ್ದರು, ಇಷ್ಟೊಂದು ಪ್ರೀತಿ ತೋರುತ್ತಿದ್ದ ಅಕ್ಕ ಬ್ರದರ್ಸ್‌ ಡೇಗೆ ವಿಶ್‌ ಮಾಡದಿದ್ದ ಮುನಿಸು ಕಾಗದದಲ್ಲಿ ಕರಗಿದೆ....




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries