ಲೇಹ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಹೊಸದಾಗಿ 49 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲ ಪ್ರಕರಣಗಳು ರಾಜಧಾನಿ ಲೇಹ್‌ನಲ್ಲಿಯೇ ಪತ್ತೆಯಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಲೇಹ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಹೊಸದಾಗಿ 49 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲ ಪ್ರಕರಣಗಳು ರಾಜಧಾನಿ ಲೇಹ್‌ನಲ್ಲಿಯೇ ಪತ್ತೆಯಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇವು ಈ ವರ್ಷ (2022ರಲ್ಲಿ) ಇಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಾಗಿವೆ.
ಇದರೊಂದಿಗೆ ಲಡಾಖ್‌ನಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 28,513ಕ್ಕೆ ಏರಿದೆ. ಈ ಪೈಕಿ 28,138 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 228 ಸೋಂಕಿತರು ಮೃತಪಟ್ಟಿದ್ದಾರೆ. ಲೇಹ್‌ನಲ್ಲಿ 168 ಮತ್ತು ಕಾರ್ಗಿಲ್‌ನಲ್ಲಿ 60 ಸಾವಿನ ಪ್ರಕರಣಗಳು ವರದಿಯಾಗಿವೆ.
ಸದ್ಯ 150 ಪ್ರಕರಣಗಳು ಸಕ್ರಿಯವಾಗಿವೆ. ಎಲ್ಲವೂ ಲೇಹ್‌ನಲ್ಲಿಯೇ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.