HEALTH TIPS

ಮಾಧ್ಯಮಗಳ ಜಾಹೀರಾತಿಗಾಗಿ 5 ವರ್ಷದಲ್ಲಿ ₹3,339 ಕೋಟಿ ವ್ಯಯಿಸಿದ ಕೇಂದ್ರ ಸರ್ಕಾರ

 

                ನವದೆಹಲಿ: ಕಳೆದ ಐದು ವರ್ಷದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ  ಜಾಹೀರಾತುಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ₹3,339 ಕೋಟಿ ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುರುವಾರ ತಿಳಿಸಿದೆ.

                  ಈ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, '2017ರಿಂದ ಈ ವರೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳಿಗಾಗಿ ಕೇಂದ್ರ ಸರ್ಕಾರ ₹3,339.49 ಕೋಟಿ ಖರ್ಚು ಮಾಡಿದೆ' ಎಂದು ಹೇಳಿದ್ದಾರೆ.

                    ಈ ಸಂಬಂಧ ಲಿಖಿತ ದಾಖಲೆ ನೀಡಿರುವ ಠಾಕೂರ್ ಅವರು, '2017-18 ರಿಂದ ಈ ವರ್ಷದ ಜುಲೈ 12 ರವರೆಗೆ ಮುದ್ರಣ ಮಾಧ್ಯಮದ ಜಾಹೀರಾತುಗಳಿಗಾಗಿ ಸರ್ಕಾರವು ₹1,756.48 ಕೋಟಿ ವ್ಯಯಿಸಿದೆ. ಇದೇ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳಿಗೆ ₹1,583.01 ಕೋಟಿ ಖರ್ಚು ಮಾಡಿದೆ' ಎಂದು ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries