ತಿರುವನಂತಪುರ: ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 506.14 ಕೋಟಿ ರೂ. ಮಂಜೂರು ಮಾಡಿದೆ. ಈ ಸಂಬಂಧ ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ.
ರಾಜ್ಯದ 30 ಪ್ರಮುಖ ರಸ್ತೆಗಳ ನವೀಕರಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದೆ. ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಿಂದ (ಸಿ.ಆರ್.ಐ.ಏಫ್) ಈ ಮೊತ್ತ ಮಂಜೂರುಗೊಳಿಸಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್, ಕೋಝಿಕ್ಕೋಡ್, ವಯನಾಡ್, ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮೂವತ್ತು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರದ ನೆರವು ಬಳಕೆಯಾಗಲಿದೆ. ಯೋಜನೆಯಡಿ ಒಟ್ಟು 403.25 ಕಿ.ಮೀ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು.
ರಾಜ್ಯದಲ್ಲಿ ರಸ್ತೆ ನವೀಕರಣ; ಕೇಂದ್ರ ಸರ್ಕಾರದಿಂದ ಕೇರಳಕ್ಕೆ 506.14 ಕೋಟಿ ರೂ. ಮಂಜೂರು
0
ಜುಲೈ 24, 2022
Tags