ನವದೆಹಲಿ: ಟೆಕ್ ದೈತ್ಯ ಗೂಗಲ್ ಇಂಡಿಯಾ ಮಂಗಳವಾರ ತನ್ನ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಗೆ ಐದು ಹೊಸ ಭಾಷೆಗಳನ್ನು ಸೇರಿಸಿದೆ, ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಗೂಗಲ್ ಗೆ ಹೊಸದಾಗಿ ಸೇರ್ಪಡೆಯಾದ ಭಾಷೆಗಳು
ಗೂಗಲ್ ಡಾಟಾ ಲೀಡ್ಸ್ ಸಹಭಾಗಿತ್ವದಲ್ಲಿ ಫ್ಯಾಕ್ಟ್-ಚೆಕ್ ಅಕಾಡೆಮಿಯನ್ನು ಪ್ರಾರಂಭಿಸಿದೆ ಎಂದು ಟೆಕ್ ದೈತ್ಯ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್‌ರೂಮ್‌ಗಳು ಮತ್ತು ಪತ್ರಕರ್ತರು ಹವಾಮಾನದ ಕುರಿತ ಮಾಹಿತಿಯನ್ನು ನಿಭಾಯಿಸಲು ಮತ್ತು ತಪ್ಪುದಾರಿಗೆಳೆಯುವ ಡೇಟಾ ಮತ್ತು ಸುಳ್ಳು ಸಂಖ್ಯೆಗಳನ್ನು ಒಳಗೊಂಡಿರುವ ಮಾಹಿತಿ ಪರಿಶೀಲಿಸಲು ಸಹಾಯ ಮಾಡಲು ಸುಮಾರು 100 ಹೊಸ ತರಬೇತುದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಗೂಗಲ್ ಹೇಳಿದೆ.
ಗೂಗಲ್ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಡಾಟಾ ಲೀಡ್ಸ್ ಜೊತೆಗೆ ಈ ನೆಟ್‌ವರ್ಕ್ 39,000ಕ್ಕೂ ಹೆಚ್ಚು ಪತ್ರಕರ್ತರು, ಪತ್ರಿಕೋದ್ಯಮ ಶಿಕ್ಷಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸತ್ಯ-ಪರೀಕ್ಷಕರು ಮತ್ತು 2300 ಕ್ಕೂ ಹೆಚ್ಚು ನ್ಯೂಸ್ ರೂಮ್ ಗಳು ಹಾಗೂ ಕನಿಷ್ಠ 10 ಭಾಷೆಗಳಲ್ಲಿ ಮಾಧ್ಯಮ ಕಾಲೇಜುಗಳನ್ನು ಹೊಂದಿದೆ.
ಆನ್‌ಲೈನ್ ತಪ್ಪು ಮಾಹಿತಿಯನ್ನು ಪರಿಶೀಲಿಸಲು ಮತ್ತು ನಿಭಾಯಿಸಲು ಅಗತ್ಯವಿರುವ ಡಿಜಿಟಲ್ ಕೌಶಲ್ಯಗಳನ್ನು ಕಲಿಯಲು ಈ ನೆಟ್‌ವರ್ಕ್ ಪತ್ರಕರ್ತರಿಗೆ ಮತ್ತು ನ್ಯೂಸ್‌ರೂಮ್‌ಗಳಿಗೆ ಬೆಂಬಲ ನೀಡುತ್ತದೆ.