ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 5 ಶುಕ್ರವಾರ ಪಪೆರಡಾಲ ಶ್ರೀ ಉದನೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ಆಡಳಿತ ಮೊಕ್ತೇಸರ ವೆಂಕಟರಮಣ ಭಟ್, ಸದಸ್ಯರಾದ ಪಿ.ಜಿ. ಜಗನ್ನಾಥ ರೈ, ಕೃಷ್ಣ ಪರಡಾಲ, ಜಗದೀಶ ಪೆರಡಾಲ, ವಿಷ್ಣು ಶರ್ಮ, ಮಾಜಿ ಆಡಳಿತ ಮೊಕ್ತೇಸರ ನಾರಾಯಣ ಭಟ್, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ ಸಿಬ್ಬಂದಿ ವರ್ಗದವರು ಭಕ್ತರು ಉಪಸ್ಥಿತರಿದ್ದರು.