HEALTH TIPS

ಧನಬಾದ್‌ ಹಿಟ್ ಅಂಡ್ ರನ್, ನ್ಯಾಯಾಧೀಶರ ಹತ್ಯೆ ಪ್ರಕರಣ: ಆಟೋ ರಿಕ್ಷಾ ಚಾಲಕ ಸೇರಿ ಇಬ್ಬರು ದೋಷಿ, ಆ.6ರಂದು ಶಿಕ್ಷೆ ಪ್ರಮಾಣ ಘೋಷಣೆ

 

           ರಾಂಚಿ: ಕಳೆದ ವರ್ಷ ಜಾರ್ಖಂಡ್‌ನ ಧನಬಾದ್‌ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಪ್ರಕರಣದ ಆರೋಪಿಗಳಾಗಿದ್ದ ಆಟೋರಿಕ್ಷಾ ಚಾಲಕ ಮತ್ತು ಇನ್ನೊಬ್ಬನನ್ನು ದೋಷಿ ಎಂದು ಮಹತ್ವದ ತೀರ್ಪು ನೀಡಿದೆ.

           ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್ ಹತ್ಯೆ ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಜನಿಕಾಂತ್ ಪಾಠಕ್ ತೀರ್ಪು ನೀಡಿದ್ದು, ಇಬ್ಬರು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 6 ರಂದು ಪ್ರಕಟಿಸಲಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

                                  ಏನಿದು ಪ್ರಕರಣ?
             49 ವರ್ಷದ ನ್ಯಾಯಾಧೀಶ ಆನಂದ್ ಅವರನ್ನು ಕಳೆದ ವರ್ಷ ಜುಲೈ 28 ರಂದು ಜಾಗಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾದಿಂದ ಗುದ್ದಿ ಕೊಲ್ಲಲ್ಲಾಗಿತ್ತು. ನ್ಯಾಯಾಧೀಶ ಆನಂದ್ ಹತ್ಯೆ ಪ್ರಕರಣದ ವಿಚಾರಣೆ ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಿತ್ತು. ಧನ್‌ಬಾದ್‌ನ ರಣಧೀರ್ ವರ್ಮಾ ಚೌಕ್‌ನಲ್ಲಿ ನ್ಯಾಯಾಧೀಶರು ರಸ್ತೆಯ ಒಂದು ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ)ಹಸ್ತಾಂತರಿಸಿತ್ತು. ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು.

                                ನ್ಯಾಯಾಧೀಶರೇ ಟಾರ್ಗೆಟ್ ಏಕೆ?
              ನ್ಯಾಯಾಧೀಶ ಉತ್ತಮ್​ ಆನಂದ್​, ಇತ್ತೀಚೆಗೆ ಹೈಪ್ರೊಫೈಲ್ ಕೇಸ್​ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಇದೇ ಸಿಟ್ಟಿಗೆ ಹತ್ಯೆ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇತ್ತೀಚೆಗಷ್ಟೇ ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣದಂತಹ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಅಲ್ಲದೇ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಹೀಗಿರುವಾಗಲೇ ಈ ಘಟನೆ ಸಂಭವಿಸಿದ್ದು, ಆಟೋ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಆರೋಪಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries